alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ಅಖಾಡಕ್ಕೆ ನಾಗಾಲ್ಯಾಂಡ್ ಚೆಲುವೆ….

naga

21 ರ ಹರೆಯದ ಲಿಮ್ಲಿಬೆನ್ಲಾವತಿ ನಾಗಾಲ್ಯಾಂಡ್ ನ ಬ್ಯೂಟಿ ಕ್ವೀನ್. ಇದೀಗ ರಾಜಕೀಯ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾಳೆ. Aongza ವಾರ್ಡ್ ನಿಂದ ಪುರಸಭೆ ಚುನಾವಣೆಗೆ ಸರ್ಧಿಸಲಿದ್ದಾಳೆ.

ಇತ್ತೀಚೆಷ್ಟೆ ನಡೆದ ‘ಮಿಸ್ ಸೂಪರ್ ಟ್ಯಾಲೆಂಟ್ ವರ್ಲ್ಡ್ -2016’ ಸ್ಪರ್ಧೆಯಲ್ಲಿ ಲಿಮ್ಲಿಬೆನ್ಲಾ ಎರಡನೇ ರನ್ನರ್ ಅಪ್ ಆಗಿದ್ರು. ಈಕೆ ‘ಟೂರಿಸಂ & ಹ್ಯುಮಾನಿಟಿ’ಯ ಬ್ರಾಂಡ್ ಅಂಬಾಸಿಡರ್ ಕೂಡ. ಚುನಾವಣಾ ಕಣಕ್ಕಿಳಿಯುವ ನಾಗಾಲ್ಯಾಂಡ್ ಚೆಲುವೆಯ ನಿರ್ಧಾರಕ್ಕೆ ಸಾಮಾಜಿಕ ತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.

ಇಷ್ಟು ಚಿಕ್ಕ ವಯಸ್ಸಿನಲ್ಲಿ, ಸ್ವಲ್ಪವೂ ಅನುಭವವಿಲ್ಲದೆ ಭ್ರಷ್ಟರಿಂದ್ಲೇ ತುಂಬಿರುವ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದು ಕಷ್ಟವಾಗಬಹುದು ಅನ್ನೋದು ಹಲವರ ಅಭಿಪ್ರಾಯ. ಮಹಿಳೆಯರಿಗೆ ಮೀಸಲಾಗಿರುವ ಸ್ಥಾನ ಬಿಟ್ಟು, ಸಾಮಾನ್ಯ ವರ್ಗದಿಂದ ಸ್ಪರ್ಧಿಸಬೇಕೆಂಬುದು ಲಿಮ್ಲಿಬೆನ್ಲಾ ಉದ್ದೇಶ.

ಪ್ರತಿಯೊಬ್ಬ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವ ಕನಸು ಅವರಿಗಿದೆ. ಅಷ್ಟೇ ಅಲ್ಲ ಉದ್ಯಮ ಲೋಕದಲ್ಲಿ ಮಹಿಳೆಯರು ಯಶಸ್ಸು ಪಡೆಯುವಂತೆ ಹೊಸ ಹೊಸ ಯೋಜನೆಗಳನ್ನು ತರುವ ಆಶಾವಾದ ಹೊಂದಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದ ನಾಗಾಲ್ಯಾಂಡ್ ನ ಮೊದಲ ಯುವತಿ ಲಿಮ್ಲಿಬೆನ್ಲಾ. ವಿವಿಧ ಸಂಸ್ಥೆಗಳು ಹಾಗೂ ಆರೋಗ್ಯ ಶಿಬಿರಗಳಿಗೆ ಧನಸಹಾಯ ಮಾಡುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಪುರಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅತಿ ಚಿಕ್ಕ ವಯಸ್ಸಿನ ಸ್ಪರ್ಧಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...