alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಈ ಪುಟ್ಟ ಬಾಲೆಯ ನೋವಿನ ಕಥೆ

nepal

ಹೆಸರೇ ಗೊತ್ತಿಲ್ಲದ ನೇಪಾಲದ ಪುಟ್ಟ ಬಾಲಕಿಯೊಬ್ಬಳು ಮುಂಬೈನ ಬೌನ್ಸಿ ಮೆಹ್ತಾ ಎಂಬುವವರ ಬದುಕನ್ನೇ ಬದಲಾಯಿಸಿದ್ದಾಳೆ. ನೇಪಾಳದ ಭೂಕಂಪದ ನಂತರ ಬೌನ್ಸಿ ಮೆಹ್ತಾ ಸ್ವಯಂಸೇವಕರಾಗಿ ಸಂತ್ರಸ್ಥರ ರಕ್ಷಣೆಗೆ ತೆರಳಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳದಲ್ಲೇ ಬಾಲಕಿಯೊಬ್ಳು ಆಟವಾಡುತ್ತಿದ್ಲು.

ಮೈತುಂಬಾ ಕೆಸರು, ಹರಿದ ಬಟ್ಟೆ, ಆರೇಳು ವರ್ಷದ ಆ ಹೆಣ್ಣುಮಗುವನ್ನು ಜನರು ಅಲ್ಲಿಂದ ಓಡಿಸಲು ಪ್ರಯತ್ನಿಸ್ತಾ ಇದ್ರು. ಇದರಿಂದ ಹೆದರಿದ ಮಗು ಓಡಿ ಬಂದು ಬೌನ್ಸಿ ಮೆಹ್ತಾರನ್ನು ತಬ್ಬಿಕೊಂಡಿತ್ತು. ಕೊನೆಗೆ ಅಲ್ಲಿಂದ ಬಾಲಕಿ ಓಡಿ ಹೋಗಿದ್ಲು. ಆ ಮಗುವಿನ ಕರುಣಾಜನಕ ಕಥೆ ಕೇಳಿ ಬೌನ್ಸಿ ಅವರ ಕರುಳು ಚುರ್ರೆಂದಿತ್ತು.

ತಂದೆ ಕುಡುಕ, ಮನೆ ಮಕ್ಕಳು ಯಾವುದೂ ಅವನಿಗೆ ಬೇಕಾಗಿರಲಿಲ್ಲ. ತಾಯಿ ಬೇರೊಬ್ಬನೊಂದಿಗೆ ಓಡಿ ಹೋಗಿದ್ಲು. ಬಾಲಕಿಯನ್ನು ನೋಡಿಕೊಳ್ತಾ ಇದ್ದ ಚಿಕ್ಕಪ್ಪ ಕಡು ಬಡವ. ತಲೆಗೆ ಏಟು ಬಿದ್ದು ಸೂಕ್ತ ಚಿಕಿತ್ಸೆ ದೊರೆಯದೆ ಬಾಲಕಿಗೆ ಮಾತು ಕೂಡ ನಿಂತು ಹೋಗಿತ್ತು. ವಿಪರ್ಯಾಸ ಅಂದ್ರೆ ಆ ಪುಟಾಣಿಗೆ ಹೆಸರೇ ಇರಲಿಲ್ಲ.

ಅವಳನ್ನು ರಕ್ಷಿಸಿ ಕರೆತರಬೇಕು ಎನ್ನುವಷ್ಟರಲ್ಲಿ ನೇಪಾಳದಲ್ಲಿ 2ನೇ ಬಾರಿಗೆ ಸಂಭವಿಸಿದ ಭೂಕಂಪದಲ್ಲಿ ಬೌನ್ಸಿ ಕೂಡ ಸಿಲುಕಿಕೊಂಡಿದ್ರು. ಹೇಗೋ ಪಾರಾಗಿ ಮುಂಬೈ ತಲುಪಿದ್ರು. ಆದ್ರೆ ಆ ಮಗುವಿನ ಚಿತ್ರ ಪದೇ ಪದೇ ಕಣ್ಣಮುಂದೆ ಬರ್ತಾ ಇತ್ತು. ನೇಪಾಳದಲ್ಲಿದ್ದ ಸ್ನೇಹಿತೆಯನ್ನು ಸಂಪರ್ಕಿಸಿ ಮಗುವಿನ ವಿವರ ಪಡೆಯಲು ಸಾಕಷ್ಟು ಕಸರತ್ತು ಮಾಡಿದ್ರು.

ಒಂದು ತಿಂಗಳ ನಂತರ ಆಕೆಯ ಚಿಕ್ಕಪ್ಪನ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೊನೆಗೆ ನೇಪಾಳಕ್ಕೆ ತೆರಳಿದ ಬೌನ್ಸಿ, ಅವರ ಮನವೊಲಿಸಿ ಬಾಲಕಿಯನ್ನು ಸ್ಪೆಷಲ್ ಎಜುಕೇಶನ್ ಮತ್ತು ರಿ ಹ್ಯಾಬಿಲಿಟೇಶನ್ ಕೇಂದ್ರಕ್ಕೆ ಭರ್ತಿ ಮಾಡಿದ್ರು. ಪುಟಾಣಿಗೆ ಅನಾಯಾ ಅಂತಾ ನಾಮಕರಣ ಮಾಡಿದ್ರು.

ಈಗ ಬಾಲಕಿ ಎಲ್ಲರಂತಾಗಿದ್ದಾಳೆ. ಆಡುತ್ತ ನಲಿಯುತ್ತ ಖುಷಿಯಾಗಿದ್ದಾಳೆ. ಬೌನ್ಸಿ ಆಗಾಗ ಅಲ್ಲಿಗೆ ಭೇಟಿ ನೀಡ್ತಾರೆ. ಬೌನ್ಸಿಯನ್ನು ಕಂಡಾಕ್ಷಣ ಓಡಿ ಬಂದು ತಬ್ಬಿಕೊಳ್ಳುವ ಮಗು ಅವರನ್ನು ಬಾಬಾ ಎಂದು ಕರೆಯುತ್ತಿದೆಯಂತೆ. ಬೌನ್ಸಿ ಮೆಹ್ತಾರ ನೈಜ ಬದುಕಿನ ಈ ಕಥೆಯನ್ನು ಫೇಸ್ಬುಕ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ಪೋಸ್ಟ್ ಗೆ ಸಾಕಷ್ಟು ಲೈಕ್ಸ್ ಮತ್ತು ಕಮೆಂಟ್ಸ್ ಕೂಡ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...