alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಒಂದೇ ಕಾರಣಕ್ಕೆ ಅವನು ಟ್ಯೂಷನ್ ಕ್ಲಾಸ್ ಮಿಸ್ ಮಾಡಿಕೊಳ್ಳಲೇ ಇಲ್ಲ

ಶಾಲೆಗೆ ಹೋಗುವಾಗ ಟ್ಯೂಷನ್ ಗೆ ಮಿಸ್ ಮಾಡದೆ ಹೋಗೋರು, ಕಾಲೇಜಿಗೆ ಕಾಲಿಟ್ಟ ಮೇಲೂ ಅಷ್ಟೇ ಸಿನ್ಸಿಯರ್ ಆಗಿ ಟ್ಯೂಷನ್ ಗೆ ಹೋಗ್ತಾರೆ ಅಂತ ಹೇಳೋದಕ್ಕಾಗೋದಿಲ್ಲ. ಆದ್ರೆ ಮುಂಬೈ ಹ್ಯೂಮನ್ಸ್ ಫೇಸ್ಬುಕ್ ಪೇಜ್ ನಲ್ಲಿ ಪ್ರತಿ ದಿನ ಟ್ಯೂಷನ್ಗೆ ಮಿಸ್ ಮಾಡದೆ ಹೋಗೋ ಯುವಕನೊಬ್ಬನ ಸ್ಟೋರಿ ಪೋಸ್ಟ್ ಆಗಿದೆ.

ಹೆಸರು ಹೇಳೋಕೆ ಇಚ್ಚಿಸದ ಇರೋ ಯುವಕನೊಬ್ಬ ತನ್ನ ಟ್ಯೂಷನ್ ಸ್ಟೋರಿಯನ್ನ ಷೇರ್ ಮಾಡಿಕೊಂಡಿದ್ದಾನೆ. ಆತ ಟ್ಯೂಷನ್ ಮಿಸ್ ಮಾಡಿಕೊಳ್ಳದೆ ಇರೋದಕ್ಕೆ ಒಂದು ಕ್ಯೂಟ್ ಮತ್ತು ಸ್ವೀಟ್ ಆದಂತಾ ಕಾರಣವೂ ಇದೆ.

ಆಕೆಯ ಒಂದು ನಗು ಪ್ರತಿ ದಿನ ಟ್ಯೂಷನ್ ಗೆ ಬರೋದಕ್ಕೆ ಕಾರಣ ಅಂತ ಯುವಕ ತನ್ನ ಮನದಾಳವನ್ನು ತೆರೆದಿಟ್ಟಿದ್ದಾನೆ. ಆಕೆಯ ನಗುವನ್ನು ನೋಡೋದಕ್ಕೆ ನಾನು ಪ್ರತಿ ದಿನ ಟ್ಯೂಷನ್ ಕ್ಲಾಸ್ ಗೆ ಬರ್ತಿದ್ದೆ. ನಿಧಾನವಾಗಿ ಅವಳ ಪರಿಚಯ ಆಯ್ತು. ಆನಂತರದಲ್ಲಿ ಇಬ್ಬರು ಫೇಸ್ ಬುಕ್ ಚಾಟ್ ಮೂಲಕ ಮಾತನಾಡೋಕೆ ಶುರುಮಾಡಿದ್ವಿ ಅಂತ ತನ್ನ ಲವ್ ಸ್ಟೋರಿಯ ಬಗ್ಗೆ ಬರೆದುಕೊಂಡಿದ್ದಾನೆ ಆ ಯುವಕ.

ಪುಸ್ತಕ ವಿನಿಮಯ, ಟ್ರೆಕ್ಕಿಂಗ್ ಸೇರಿದಂತೆ ಟ್ಯೂಷನ್ ಸಂದರ್ಭದಲ್ಲಿ ನಡೆದ ಅನೇಕ ಮಾತುಕತೆ ನಮ್ಮನ್ನ ಹತ್ತಿರವಾಗಿಸಿತು ಅಂತಾನೇ ಆ ಯುವಕ. ಇಬ್ಬರ ಮನದಲ್ಲೂ ಪ್ರೀತಿ ಇತ್ತು. ಆದ್ರೆ ಅದನ್ನ ನಾವಿಬ್ಬರು ಯಾವತ್ತೂ ಹೇಳಿಕೊಳ್ಳಲಿಲ್ಲ. ಪರಸ್ಪರ ಐ ಲವ್ ಯು ಹೇಳದೆಯೇ ನಾವಿಬ್ಬರು ಎರಡೂವರೆ ವರ್ಷದಿಂದ ಪ್ರೀತಿಸ್ತಿದ್ದೀವಿ ಎಂದಿದ್ದಾನೆ ಟ್ಯೂಷನ್ ಪ್ರೇಮಿ.

ಈ ಟ್ಯೂಷನ್ ಪ್ರೇಮಕಥೆ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಲೈಕ್ಸ್, ಕಾಮೆಂಟ್ ಗಳು ಹರಿದು ಬಂದಿವೆ. ಈತನಿಂದ ಸ್ಫೂರ್ತಿ ಪಡೆದ ಯುವಕರು ಕೂಡ ಇನ್ಮುಂದೆ ಟ್ಯೂಷನ್ ಕ್ಲಾಸ್ ಮಿಸ್ ಮಾಡಿಕೊಳ್ಳೋದಿಲ್ಲ ಅಂತ ತರಲೆ ಕಾಮೆಂಟ್ಸ್ ಹಾಕ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...