alex Certify
ಕನ್ನಡ ದುನಿಯಾ       Mobile App
       

Kannada Duniya

ಗಿನ್ನಿಸ್ ದಾಖಲೆ ಮಾಡಿದ್ದಾರೆ ಮಹಿಳೆ ಪ್ರಾಣ ಉಳಿಸಿದ ಮುಂಬೈ ವೈದ್ಯರು

ಮುಂಬೈ ಆಸ್ಪತ್ರೆಯ ವೈದ್ಯರು 5.5 ಕೆಜಿ ತೂಕದ ಕಿಡ್ನಿ ಟ್ಯೂಮರ್ ಹೊರತೆಗೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. 2016ರ ನವೆಂಬರ್ ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಆದ್ರೆ ಈಗ ವೈದ್ಯರ ಸಾಧನೆ ಗಿನ್ನಿಸ್ ಪುಟ ಸೇರಿದೆ.

ಬಿಹಾರದ 28 ವರ್ಷದ ಮಂಜು ದೇವಿ ಎಂಬ ಮಹಿಳೆಗೆ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿತ್ತು. ಸುಮಾರು 3 ವರ್ಷಗಳಿಂದ ಆಕೆ ತೀವ್ರ ನೋವಿನಿಂದ ಬಳಲುತ್ತಿದ್ದಳು. ಸಿಯಾನ್ ಆಸ್ಪತ್ರೆಯಲ್ಲಿ ಡಾ.ಅಜಿತ್ ಸಾವಂತ್ ನೇತೃತ್ವದ ತಂಡ ಆಕೆಗೆ ಆಪರೇಶನ್ ಮಾಡಿದೆ.

ಹೊಟ್ಟೆಯ ಬಲಭಾಗದಲ್ಲಿ ಬೆಳೆದಿದ್ದ ಗಡ್ಡೆ ಲಿವರ್, ಪ್ಯಾಂಕ್ರಿಯಾಸ್ ಮತ್ತು ಕರುಳನ್ನು ಎಡಭಾಗಕ್ಕೆ ಒತ್ತುತ್ತಿತ್ತು. ಗಡ್ಡೆ ಬಹಳ ದೊಡ್ಡ ಗಾತ್ರದ್ದಾಗಿದ್ದರಿಂದ ವಿವಿಧ ಆಸ್ಪತ್ರೆಗೆ ಅಲೆದ್ರೂ ಪ್ರಯೋಜನವಾಗಿರಲಿಲ್ಲ. ಯಾರೂ ಕೂಡ ಆಕೆಗೆ ಸರ್ಜರಿ ಮಾಡಲು ಒಪ್ಪಿರಲಿಲ್ಲ.

ಸಿಯಾನ್ ಆಸ್ಪತ್ರೆಯಲ್ಲಿ ಸತತ 9 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ 5.5 ಕೆಜಿ ತೂಕದ ಗಡ್ಡೆಯನ್ನು ವೈದ್ಯರು ಹೊರತೆಗೆದಿದ್ದರು. ಕೇವಲ ಒಂದೇ ವಾರದಲ್ಲಿ ಗುಣಮುಖಳಾಗಿದ್ದ ಮಂಜು ದೇವಿ, ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...