alex Certify
ಕನ್ನಡ ದುನಿಯಾ       Mobile App
       

Kannada Duniya

NSG ‘ಕಮಾಂಡೋ’ ಗಳ ಬೈಕ್ ಖರೀದಿಸಿದ ಸಂಭ್ರಮದಲ್ಲಿ ಮುಂಬೈ ಮೂಲದ ವ್ಯಕ್ತಿ

ಬೈಕರ್ ಗಳು ವಿಶೇಷ ಮಾದರಿಯ ಬೈಕ್ ಗಳನ್ನು ಖರೀದಿಸಲು ಆಸಕ್ತಿ ಹೊಂದಿರುತ್ತಾರೆ. ಕೆಲವರು ತಾವು ಖರೀದಿಸಿದ ಬೈಕನ್ನೇ ತಮಗೆ ಬೇಕಾದ ವಿನ್ಯಾಸಕ್ಕೆ ಬದಲಿಸಿಕೊಳ್ಳುತ್ತಾರೆ. ಆದರೆ ಮುಂಬೈ ಬೈಕರ್ ಒಬ್ಬರು ಎನ್.ಎಸ್.ಜಿ. ಬ್ಲಾಕ್ ಕ್ಯಾಟ್ ಕಮಾಂಡೋಗಳಿಗೆಂದೇ ತಯಾರಿಸಲಾಗಿದ್ದ ಲಿಮಿಟೆಡ್ ಎಡಿಷನ್ ಬೈಕ್ ಖರೀದಿಸಿ ಸಂಭ್ರಮಿಸುತ್ತಿದ್ದಾರೆ.

ಎನ್.ಎಸ್.ಜಿ. ಬ್ಲಾಕ್ ಕ್ಯಾಟ್ ಕಮಾಂಡೋಗಳಿಗೆಂದೇ ರಾಯಲ್ ಎನ್ ಫೀಲ್ಡ್ ಸಂಸ್ಥೆ ಕೇವಲ 15 ಬೈಕ್ ಗಳನ್ನು ವಿಶೇಷವಾಗಿ ತಯಾರಿಸಿತ್ತು. 2017 ರ ಸೆಪ್ಟೆಂಬರ್ 7 ರಂದು ಆಯೋಜಿಸಲಾಗಿದ್ದ ಅಭಿಯಾನವೊಂದರಲ್ಲಿ ಎನ್.ಎಸ್.ಜಿ. ಕಮಾಂಡೋಗಳು ಈ ಬೈಕ್ ಗಳಲ್ಲಿ 40 ದಿನಗಳ ಕಾಲ 8 ಸಾವಿರ ಕಿ.ಮೀ. ಕ್ರಮಿಸಿದ್ದರು.

ಬಳಿಕ ಆಶಕ್ತರ ಏಳಿಗೆಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ನೆರವಾಗುವ ಉದ್ದೇಶದಿಂದ ಈ ಬೈಕ್ ಗಳನ್ನು ಆನ್ ಲೈನ್ ನಲ್ಲಿ ಹರಾಜು ಮಾಡಲು ತೀರ್ಮಾನಿಸಲಾಗಿತ್ತು. 2017 ರ ಡಿಸೆಂಬರ್ 13 ರಂದು ಈ ಹರಾಜು ನಡೆದಿದ್ದು, ಮುಂಬೈ ಮೂಲದ ಹೋಟೆಲ್ ಉದ್ಯಮಿ 43 ವರ್ಷದ ಅವಿನಾಶ್ ಕುಶೆ ಕ್ಲಾಸಿಕ್ ಎನ್ ಫೀಲ್ಡ್ 500 ಬೈಕನ್ನು 1.90 ಲಕ್ಷ ರೂಪಾಯಿಗಳಿಗೆ ತಮ್ಮದಾಗಿಸಿಕೊಂಡಿದ್ದಾರೆ. ಎನ್.ಎಸ್.ಜಿ. ಬ್ಲಾಕ್ ಕ್ಯಾಟ್ ಕಮಾಂಡೋಗಳಿಗೆಂದು ತಯಾರಿಸಿದ್ದ ಬೈಕ್ ಈಗ ತಮ್ಮದಾಗಿರುವುದರಿಂದ ಸಂಭ್ರಮದಲ್ಲಿರುವ ಅವಿನಾಶ್ ಇದು ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಎಂದಿದ್ದಾರೆ. ಹರಾಜಿಗಿದ್ದ 15 ಬೈಕ್ ಗಳು ಆನ್ ಲೈನ್ ನಲ್ಲಿ ಕೆಲ ಕ್ಷಣಗಳಲ್ಲೇ ಮಾರಾಟವಾಗಿದ್ದು, ಬೈಕ್ ಪಡೆದ ಅದೃಷ್ಟವಂತರ ಪೈಕಿ ತಾನೂ ಒಬ್ಬ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...