alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಇಟ್ಟುಕೊಳ್ಳಲೆಂದೇ ಬರ್ತಿದೆ ಹೊಸ ಬಗೆಯ ಜೀನ್ಸ್

jeans

ಇನ್ಮೇಲೆ ನಿಮಗೆ ಡೆನಿಮ್ ಜೀನ್ಸ್ ಗಳಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಳ್ಳಲು ಯಾವುದೇ ತಾಪತ್ರಯವಿಲ್ಲ. ಯಾಕಂದ್ರೆ ಇದಕ್ಕಾಗಿಯೇ ಜೀನ್ಸ್ ಅನ್ನು ವಿಶಿಷ್ಟವಾಗಿ ವಿನ್ಯಾಸ ಮಾಡಲಾಗ್ತಿದೆ. ಮೊಬೈಲ್ ಇಟ್ಟುಕೊಳ್ಳಲು ಪ್ರತ್ಯೇಕ ಜೇಬನ್ನು ಇಡಲಾಗ್ತಿದೆ. ಅದರಲ್ಲಿ ಮೊಬೈಲ್ ಜೊತೆಗೆ ಚಾರ್ಜರ್ ಅನ್ನು ಕೂಡ ನೀವು ಸೇಫಾಗಿ ಇಟ್ಟುಕೊಳ್ಳಬಹುದು.

ಸ್ಮಾರ್ಟ್ ಫೋನ್ ಗಳನ್ನು ಗಮನದಲ್ಲಿಟ್ಟುಕೊಂಡು ಈ ಕಿಸೆಯನ್ನು ವಿನ್ಯಾಸ ಮಾಡಲಾಗಿದೆ. ವಿಶೇಷ ಅಂದ್ರೆ ಕೇಸ್ ಸಮೇತ ನೀವು ಈ ಜೇಬಿನಲ್ಲಿ ಮೊಬೈಲ್ ಇಡಬಹುದು. ಮುಜಿ ಬ್ರಾಂಡ್ ನ ಜೀನ್ಸ್ ಗಳಲ್ಲಿ ಸದ್ಯ ಹೊಸ ಬಗೆಯ ವಿನ್ಯಾಸ ಲಭ್ಯವಾಗಲಿದೆ.

ಈ ರೀತಿ ಮೊಬೈಲ್ ಗೆ ಸಪರೇಟ್ ಪಾಕೆಟ್ ಇಟ್ಟಿರೋದ್ರಿಂದ ಜನರಿಗೆ ಅನುಕೂಲವಾಗಲಿದೆ. ಹಿಂದಿನ ಕಿಸೆಯಲ್ಲಿ ಮೊಬೈಲ್ ಇಟ್ಕೊಂಡು ಕುಳಿತುಕೊಳ್ಳಲು ತಾಪತ್ರಯಪಡಬೇಕಿಲ್ಲ. ಇದರಿಂದ ಮೊಬೈಲ್ ಗೆ ಕೂಡ ಹಾನಿಯಾಗುವುದಿಲ್ಲ. ಅಷ್ಟೇ ಅಲ್ಲ ಮೊಬೈಲ್ ಅನ್ನು ಯಾರಾದ್ರು ಕಳವು ಮಾಡುವುದು ಕೂಡ ಕಷ್ಟವಾಗಲಿದೆ.

ನಿಮ್ಮ ಫೋನ್ ದೊಡ್ಡದಾಗಿದ್ರೆ ಹಿಂದಿನ ಜೇಬಿನಲ್ಲಿ ಹಿಡಿಸುವುದಿಲ್ಲ. ಅದನ್ನು ಎಲ್ಲಿಟ್ಕೊಳ್ಳೋದು ಅಂತಾ ನೀವು ಯೋಚನೆ ಮಾಡಬೇಕಾಗಿ ಬರುತ್ತದೆ. ಆದ್ರೆ ಹೊಸ ವಿನ್ಯಾಸದ ಜೀನ್ಸ್ ಗಳಲ್ಲಿ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...