alex Certify
ಕನ್ನಡ ದುನಿಯಾ       Mobile App
       

Kannada Duniya

12 ವರ್ಷ ಮಗನನ್ನು ಸ್ಪರ್ಶಿಸಲೇ ಇಲ್ಲ ಮಹಾತಾಯಿ

2016_6image_

ಮಗು ಬಂದು ತಾಯಿಯನ್ನು ಅಪ್ಪಿ ಮುತ್ತಿಟ್ಟಾಗ ಸಿಗುವ ಸಂತೋಷ ಮತ್ತ್ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ತಾಯಿಗೆ ಮಕ್ಕಳೆ ಸರ್ವಸ್ವ. ಅವರ ಆಟ, ಓಟ, ತುಂಟಾಟದ ಜೊತೆ ಸಮಯ ಕಳೆದಿದ್ದು ತಿಳಿಯುವುದಿಲ್ಲ. ಆದ್ರೆ ಇಲ್ಲೊಬ್ಬ ತಾಯಿಗೆ ಮಗ ಹುಟ್ಟಿ 12 ವರ್ಷವಾದ್ರೂ ಆತನನ್ನು ಸ್ಪರ್ಶಿಸುವ ಭಾಗ್ಯವೇ ಸಿಗಲಿಲ್ಲ.

ಮಗನನ್ನು ಜೀವಂತವಾಗಿ ನೋಡಲು ಬಯಸಿದ್ದ ತಾಯಿ ಮಗನನ್ನು ಸ್ಪರ್ಶಿಸಲೇ ಇಲ್ಲ. ಬಬಲ್ ನಲ್ಲಿಯೇ ಆತ ತನ್ನ ಜೀವನವನ್ನು ಕಳೆದಿದ್ದ. ಅಮೆರಿಕಾದ ಟೆಕ್ಸಾಸ್ ನಲ್ಲಿ ವಾಸವಾಗಿದ್ದ ಡೇವಿಡ್ ಒಂದು ಭಯಾನಕ ರೋಗದಿಂದ ಬಳಲ್ತಿದ್ದ. ಆತನನ್ನು ಯಾರಾದ್ರೂ ಸ್ಪರ್ಶಿಸಿದ್ರೆ ಆತ ಸಾವನ್ನಪ್ಪುವ ಸಾಧ್ಯತೆ ಇತ್ತು. ಹಾಗಾಗಿ ಮಗನ ಜೀವ ಉಳಿಸಲು ನಿರ್ಧರಿಸಿದ ತಾಯಿ 12 ವರ್ಷಗಳ ಕಾಲ ಮಗನನ್ನು ಮುಟ್ಟಲಿಲ್ಲ.

ಈ ರೋಗದಿಂದ ಬಳಲುತ್ತಿರುವವರನ್ನು ಮುಟ್ಟಿದ್ರೆ ಸೋಂಕು ಹರಡಲು ಶುರುವಾಗುತ್ತದೆ. ಇದರಿಂದ ಅವರು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಹೇಳಿದ್ದರು. ಡೇವಿಡ್ ಗಿಂತ ಮೊದಲ ಆತನ ಸಹೋದರನಿಗೂ ಈ ರೋಗವಿತ್ತು. ಆತ 8 ತಿಂಗಳು ಮಾತ್ರ ಬದುಕಿದ್ದ. ಹಾಗಾಗಿ ನಾಸಾ ವಿಜ್ಞಾನಿಗಳು ಡೇವಿಡ್ ಗಾಗಿ ಒಂದು ವಿಶೇಷ ಕವಚವನ್ನು ಸಿದ್ಧಪಡಿಸಿದ್ದರು. ಇದನ್ನು ಡಾಕ್ಟರ್ ಬಬಲ್ ಎಂದು ಕರೆಯುತ್ತಾರೆ. ಡೇವಿಡ್ 12 ವರ್ಷ ಈ ಬಬಲ್ ಒಳಗೆ ಜೀವನ ನಡೆಸಿದ್ದ.

ಈ ರೋಗದಿಂದ ಮುಕ್ತಿ ನೀಡಲು ವಿಜ್ಞಾನಿಗಳು ಬೋನ್ ಮ್ಯಾರೋ ಕಸಿ ಮಾಡುವಂತೆ ಸಲಹೆ ನೀಡಿದ್ದರಂತೆ. 1971 ಸೆಪ್ಟೆಂಬರ್ ನಲ್ಲಿ ಜನಿಸಿದ್ದ ಡೇವಿಡ್ ಗೆ 22 ಫೆಬ್ರವರಿ 1984 ರಂದು ಬೋನ್ ಮ್ಯಾರೋ ಕಸಿ ಮಾಡಲಾಯ್ತು. ಆದ್ರೆ ಈ ವೇಳೆ ಡೇವಿಡ್ ಗೆ ರಕ್ತವಾಂತಿಯಾಗಿ ಆತ ಸಾವನ್ನಪ್ಪಿದ.

ಮಗ ಸತ್ತ ಮೇಲೆ ತಾಯಿ ಮಗನನ್ನು ಸ್ಪರ್ಶಿಸಿದ್ದಳು. ಅಲ್ಲಿಯವರೆಗೆ ಬಬಲ್ ಒಳಗೆ ಮಗನನ್ನಿಟ್ಟು ರಕ್ಷಣೆ ಮಾಡಿದ್ದಳು ಮಹಾತಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...