alex Certify
ಕನ್ನಡ ದುನಿಯಾ       Mobile App
       

Kannada Duniya

ಕದ್ದು ಪೆಟ್ರೋಲ್ ಕುಡಿಯುವಾಗಲೇ ಸಿಕ್ಕಿ ಬಿತ್ತು ಮಂಗ

ಕೆಟ್ಟ ಚಟಗಳಿಗೆ ದಾಸರಾಗುವುದು ಕೇವಲ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಕೆಲ ಪ್ರಾಣಿಗಳೂ ಇದಕ್ಕೆ ಹೊರತಲ್ಲ ಎಂಬ ಸಂಗತಿ ಈ ಪ್ರಕರಣದಲ್ಲಿ ನಿರೂಪಿತವಾಗಿದೆ. ಪೆಟ್ರೋಲ್ ಕುಡಿಯುವ ಚಟಕ್ಕೆ ಬಿದ್ದಿದ್ದ ಮಂಗವೊಂದು ವಾಹನಗಳ ಪೈಪ್ ಕಿತ್ತು ಪೆಟ್ರೋಲ್ ಕುಡಿಯುತ್ತಿದ್ದು, ಇದೀಗ ರೆಡ್ ಹ್ಯಾಂಡಾಗಿ ವಾಹನ ಮಾಲೀಕರ ಕೈಗೆ ಸಿಕ್ಕಿ ಬಿದ್ದಿದೆ.

ಘಟನೆ ಪಾನಿಪತ್ ನಲ್ಲಿ ನಡೆದಿದೆ ಎನ್ನಲಾಗಿದ್ದು, ಮಂಗ ಪೆಟ್ರೋಲ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾನಿಪತ್ ನ ಪ್ರದೇಶವೊಂದರ ನಿವಾಸಿಗಳ ಬೈಕ್ ನಲ್ಲಿನ ಪೆಟ್ರೋಲನ್ನು ನಿತ್ಯವೂ ಯಾರೋ ಕದಿಯುತ್ತಿದ್ದರು.

ಪೆಟ್ರೋಲ್ ಕಳ್ಳನನ್ನು ರೆಡ್ ಹ್ಯಾಂಡಾಗಿ ಹಿಡಿಯಬೇಕೆಂದು ಕಾದು ಕುಳಿತಿದ್ದ ವಾಹನ ಮಾಲೀಕರಿಗೆ ಅಚ್ಚರಿ ಕಾದಿದ್ದು, ಮಂಗವೊಂದು ಪೆಟ್ರೋಲ್ ಪೈಪ್ ಕಿತ್ತು ಕುಡಿದಿರುವುದು ಕಂಡು ಬಂದಿದೆ. ಈ ಮಂಗಕ್ಕೆ ಬಾಳೆಹಣ್ಣು ಕೊಟ್ಟರೂ ತಿನ್ನುತ್ತಿರಲಿಲ್ಲವೆನ್ನಲಾಗಿದ್ದು, ಪೆಟ್ರೋಲ್ ಕುಡಿದು ಸದಾ ಅಮಲಿನಲ್ಲಿರಲು ಹವಣಿಸುತ್ತಿತ್ತು ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...