alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸ ಮಾಡದಿದ್ದರೂ ಸಿಗುತ್ತೇ 1.70 ಲಕ್ಷ ರೂ. ಸಂಬಳ..!?

swiss

ಜಿನೆವಾ: ಮೈ ಮುರಿದು ಕೆಲಸ ಮಾಡಿ, ಬೆವರು ಸುರಿಸಿ ದುಡಿದರೂ, ಕೆಲವೊಮ್ಮೆ ಸಂಬಳ ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಕೆಲಸ ಮಾಡದಿದ್ದರೂ, ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಸಂದಾಯವಾಗುವಂತಿದ್ದರೆ ಹೇಗಿರುತ್ತೆ?

ಸ್ವಿಟ್ಜರ್ ಲ್ಯಾಂಡ್ ನಲ್ಲಿ ಕೆಲಸ ಮಾಡದಿದ್ದರೂ ವಯಸ್ಕರಿಗೆ ತಿಂಗಳಿಗೆ 1.70 ಲಕ್ಷ ರೂಪಾಯಿ ವೇತನ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. 5 ವರ್ಷಗಳ ಕಾಲ ಸ್ವಿಟ್ಜರ್ ಲ್ಯಾಂಡ್ ನಲ್ಲಿ ನೆಲೆಸಿರುವ ವಯಸ್ಕರಿಗೆ ಕೆಲಸ ಮಾಡದಿದ್ದರೂ, ಮೂಲ ವೇತನ ನೀಡುವ ಕುರಿತಾಗಿ ಪರ- ವಿರೋಧ ಚರ್ಚೆ ನಡೆದು, ದೇಶಾದ್ಯಂತ ಭಾನುವಾರ ಜನಮತ ಸಂಗ್ರಹಣೆ ನಡೆಸಲಾಗಿದೆ. ಈ ನಿರ್ಧಾರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಬೆಂಬಲಿಸಿದ್ದಾರೆ.

ಉತ್ತಮ ಉದ್ಯೋಗಾವಕಾಶ ಸಿಗದ ಇಂದಿನ ದಿನಗಳಲ್ಲಿ ಇಂತಹ ತೀರ್ಮಾನ ಒಳ್ಳೆಯದೆಂದು ಕೆಲವರು ಹೇಳಿದರೆ, ಶೇ.71ರಷ್ಟು ಮಂದಿ ಇದಕ್ಕೆ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಭಾನುವಾರ ಶಿಫಾರಸ್ಸಿನ ವಿರುದ್ಧವೇ ಹೆಚ್ಚಿನ ಮತ ಚಲಾವಣೆ ಆಗಿರಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...