alex Certify
ಕನ್ನಡ ದುನಿಯಾ       Mobile App
       

Kannada Duniya

ಒಡೆದ ಮೊಬೈಲ್ ಸ್ಕ್ರೀನ್ ಸರಿ ಮಾಡೋದೇಗೆ…?

broken_screen

ಕೆಲವರಿಗೆ ಮೊಬೈಲ್ ಎಂದ್ರೆ ಪ್ರಾಣ. ಸ್ಮಾರ್ಟ್ ಫೋನ್ ಸ್ಕ್ರೀನ್ ಗೆ ಸಣ್ಣ ಗೀರು ಬಿದ್ದರು ಬೇಸರಗೊಳ್ತಾರೆ. ಅಪ್ಪಿ ತಪ್ಪಿ ಸ್ಕ್ರೀನ್ ಒಡೆದ್ರೆ ಮುಗಿದೇ ಹೋಯ್ತು. ಸರ್ವಿಸ್ ಸೆಂಟರ್ ಅಥವಾ ಫೋನ್ ಸೆಂಟರ್ ಗೆ ಓಡ್ತಾರೆ. ಇನ್ನೂ ಕೆಲವರು ಹೊಸ ಮೊಬೈಲ್ ಖರೀದಿ ಮಾಡ್ತಾರೆ. ಆದ್ರೆ ಇನ್ನು ಮುಂದೆ ಸ್ಮಾರ್ಟ್ ಫೋನ್ ಸ್ಕ್ರೀನ್ ಹಾಳಾದ್ರೆ ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ರಿಪೇರಿ ಮಾಡಿಕೊಳ್ಳಬಹುದು.

ಯಸ್, ಮನೆಯಲ್ಲಿಯೇ ಕುಳಿತು ಸ್ಮಾರ್ಟ್ ಫೋನ್ ನ ಸ್ಕ್ರೀನ್ ಸರಿ ಮಾಡಿಕೊಳ್ಳಬಹುದು. ಇದಕ್ಕೆ ನೀವು ಮಾಡಬೇಕಾಗಿದ್ದು ಇಷ್ಟೆ, iFixit  ಆನ್ಲೈನ್ ಟುಟೋರಿಯಲ್ ಓಪನ್ ಮಾಡುವುದು. ಅದ್ರಲ್ಲಿ ಬೇರೆ ಬೇರೆ ಕಂಪನಿಗಳ ಮೊಬೈಲ್ ಸ್ಕ್ರೀನ್ ಹೇಗೆ ಸರಿ ಮಾಡಬಹುದೆಂಬುದರ ವಿವರ ಇದೆ. ಕೆಲವೊಮ್ಮೆ ಸ್ಕ್ರೀನ್ ಬದಲಾಯಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಗ್ಲಾಸ್ ಬದಲಾಯಿಸಬೇಕಾಗುತ್ತದೆ. iFixit ನೋಡಿ ನಿಮ್ಮ ಮೊಬೈಲ್ ಗೆ ಯಾವುದು ಬೇಕು ಅದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

iFixit n ವೆಬ್ ಸೆಟ್ ಅಲ್ಲದೆ ನೀವು ಯುಟ್ಯೂಬ್ ಮೂಲಕ ಕೂಡ ಮೊಬೈಲ್ ರಿಪೇರಿ ಬಗ್ಗೆ ಮಾಹಿತಿ ಪಡೆಯಬಹುದು. ಇದರ ಮೂಲಕ ಮಾಹಿತಿ ಪಡೆದು ನಿಮ್ಮ ಹಾಳಾದ ಮೊಬೈಲನ್ನು ಮತ್ತೆ ಮೊದಲಿನ ರೂಪಕ್ಕೆ ತನ್ನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...