alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಸಕರ ಚಡಪಡಿಕೆಗೆ ಕಾರಣವಾಗಿದೆ ಕೆಂಪು ದೀಪ

red-beaconದೇಶದಲ್ಲಿ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಸೇರಿದಂತೆ ಅತಿ ಗಣ್ಯರ ಕಾರುಗಳನ್ನು ಹೊರತುಪಡಿಸಿ ಉಳಿದವರು ತಮ್ಮ ಕಾರುಗಳ ಮೇಲೆ ವಿಐಪಿ ಸಂಸ್ಕೃತಿಯ ಪ್ರತೀಕವಾದ ಕೆಂಪು ಅಳವಡಿಸಬಾರದೆಂಬ ಕಾನೂನು ಮಾಡಿದ್ದು, ಇದು ಮೇ 1 ರಿಂದಲೇ ಜಾರಿಗೆ ಬಂದಿದೆ.

ಇದಕ್ಕೆ ತಲೆಬಾಗಿರುವ ಕೇಂದ್ರ ಸಚಿವರುಗಳು, ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಬಹುತೇಕ ಎಲ್ಲರೂ ತಮ್ಮ ಕಾರಿನ ಮೇಲೆ ಅಳವಡಿಸಿದ್ದ ಕೆಂಪು ದೀಪಗಳನ್ನು ತೆಗೆಸಿಹಾಕಿದ್ದಾರೆ. ಆದರೆ ಪಂಜಾಬ್ ನ ಕೆಲ ಶಾಸಕರು ಅದರಲ್ಲೂ ಮೊದಲ ಬಾರಿ ಆಯ್ಕೆಯಾದವರು ಈ ಕಾನೂನಿನ ಕುರಿತು ಗೊಣಗಾಟ ಆರಂಭಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಚುನಾವಣಾ ಪೂರ್ವ ಘೋಷಿಸಿದಂತೆ ಅಧಿಕಾರಕ್ಕೇರುತ್ತಲೇ ವಿಐಪಿಗಳು ತಮ್ಮ ಕಾರಿನ ಮೇಲಿನ ಕೆಂಪು ದೀಪ ತೆಗೆಸಿಹಾಕಲು ಕ್ರಮ ಕೈಗೊಂಡಿದ್ದರು. ಸ್ವತಃ ಮುಖ್ಯಮಂತ್ರಿಗಳೇ ಪ್ರಥಮವಾಗಿ ಇದನ್ನು ಪಾಲಿಸಿದ್ದರು. ಈ ಹಿಂದೆ ಪಂಜಾಬ್ ನಲ್ಲಿ ಶಾಸಕರುಗಳೂ ತಮ್ಮ ಕಾರುಗಳ ಮೇಲೆ ಕೆಂಪು ದೀಪ ಅಳವಡಿಸಿಕೊಂಡಿದ್ದು, ಇದೀಗ ಅದನ್ನು ತೆಗೆಸಿ ಹಾಕಿರುವುದಕ್ಕೆ ತಮಗಾಗುತ್ತಿರುವ ತೊಂದರೆಗಳನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ.

ತಮ್ಮ ಕಾರುಗಳ ಮೇಲೆ ಕೆಂಪು ದೀಪ ಇಲ್ಲದ ಕಾರಣ ಟೋಲ್ ಬೂತ್ ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿದೆ. ತಾವು ಶಾಸಕರೆಂದು ಹೇಳಿದರೂ ಟೋಲ್ ಪ್ಲಾಜಾದ ಸಿಬ್ಬಂದಿ ನಂಬುತ್ತಿಲ್ಲ. ಗುರುತು ಪತ್ರ ತೋರಿಸಿದ ಬಳಿಕವಷ್ಟೇ ಸಾಗಲು ಅನುಮತಿ ನೀಡುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಪೊಲೀಸ್ ಪೇದೆಗಳೂ ತಮಗೆ ಸೆಲ್ಯೂಟ್ ಹೊಡೆಯುತ್ತಿಲ್ಲವೆಂಬ ಕೊರಗು ಈ ಶಾಸಕರನ್ನು ಕಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...