alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಡೇಟ್ ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಪ್ರೇಮಿಗಳು ಪರಸ್ಪರ ಭೇಟಿಯಾಗೋದು ಮಾಮೂಲಿ. ಈ ಭೇಟಿಯನ್ನೇ ಡೇಟಿಂಗ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮೊದಲ ಭೇಟಿಯನ್ನು ಪ್ರೇಮಿಗಳು ಸದಾ ನೆನಪಿಟ್ಟುಕೊಳ್ತಾರೆ. ಮೊದಲ ಡೇಟಿಂಗ್ ಸಂಬಂಧ ಗಟ್ಟಿಗೊಳಿಸುವ ಹಾಗೆ ಸಂಬಂಧ ಹಾಳು ಮಾಡುವ ಶಕ್ತಿಯನ್ನು ಹೊಂದಿದೆ. ಹುಡುಗಿಯರನ್ನು ಆಕರ್ಷಿಸಲು ಇದು ಒಳ್ಳೆ ಅವಕಾಶ.

ಫಸ್ಟ್ ಈಸ್ ಬೆಸ್ಟ್ ಎನ್ನುವ ಮಾತಿದೆ. ಮೊದಲ ಭೇಟಿ ಅತ್ಯುತ್ತಮವಾದ್ರೆ ಮುಂದಿನದೆಲ್ಲ ಒಳ್ಳೆಯದಾಗುತ್ತದೆ ಎಂದೇ ಅರ್ಥ. ಮೊದಲ ಭೇಟಿ ವೇಳೆ ಮನಸ್ಸು ಮುರಿಯುವಂತಹ ಯಾವುದೇ ಕೆಲಸಗಳನ್ನು ಮಾಡಬಾರದು. ಮದ್ಯಪಾನದಿಂದ ದೂರವಿರುವುದು ಒಳ್ಳೆಯದು. ಹೆಚ್ಚು ಆಪ್ತರಾಗಲು ಪ್ರಯತ್ನಿಸಬೇಡಿ.

ನಿಮ್ಮ ಆಸಕ್ತಿ, ಇಷ್ಟಗಳ ಬಗ್ಗೆ ಸ್ವಲ್ಪ ಮಾತನಾಡಿ. ಮೊದಲ ಭೇಟಿಯಲ್ಲೇ ಸಂಗಾತಿಗೆ ಡ್ರಿಂಕ್ ಆಫರ್ ಮಾಡಬೇಡಿ. ಹುಡುಗಿ ನಿಮ್ಮಿಂದ ಏನನ್ನು ಬಯಸ್ತಾಳೆ ಎಂಬುದನ್ನು ತಿಳಿಯಲು ಪ್ರಯತ್ನಿಸಿ. ಹುಡುಗಿ ಮುಂದೆ ಹೆಚ್ಚು ಸ್ಟೈಲ್ ಮಾಡುವ ಅಗತ್ಯವಿಲ್ಲ. ಆದ್ರೆ ಹುಡುಗಿ ಹೊಗಳೋದನ್ನು ಮರೆಯಬೇಡಿ. ಡ್ರೆಸ್ ಚೆನ್ನಾಗಿದೆ, ಸುಂದರವಾಗಿ ಕಾಣ್ತಿಯಾ ಹೀಗೆ ಅವಕಾಶ ಸಿಕ್ಕಾಗ ಆಕೆಯನ್ನು ಹೊಗಳಿ.

ಭೇಟಿಗೂ ಮುನ್ನ ಪ್ಲಾನ್ ತಯಾರಿಸಿಕೊಳ್ಳಿ. ಎಲ್ಲಿ ಹೋಗಬೇಕು? ಯಾವ ಬಟ್ಟೆ ಧರಿಸಬೇಕು? ಎಷ್ಟು ಹೊತ್ತು ಇರಬೇಕು? ಏನೆಲ್ಲ ಮಾತನಾಡಬೇಕು? ಎಂಬುದನ್ನು ಮೊದಲೇ ಯೋಚನೆ ಮಾಡಿ. ಹುಡುಗಿ ಮುಂದೆ ಯಡವಟ್ಟಾಗುವುದು ಬೇಡ. ಹಾಗೆ ಮೊದಲ ಭೇಟಿ ರೋಮ್ಯಾಂಟಿಕ್ ಆಗಿರುತ್ತದೆ ಎಂದುಕೊಳ್ಳಬೇಡಿ. ಕಡಿಮೆ ಸಮಯದಲ್ಲಿ ಆರಾಮವಾಗಿ ಮಾತನಾಡುವ ಸಮಯವನ್ನು ಆಯ್ಕೆ ಮಾಡಿಕೊಂಡು ಆಕೆಗೆ ನಿಮ್ಮಲ್ಲಿ ಆಸಕ್ತಿ ಇದೆಯಾ ಎಂಬುದನ್ನು ತಿಳಿದುಕೊಳ್ಳಿ. ಹುಡುಗಿಯನ್ನು ಮೊದಲ ಭೇಟಿಯಲ್ಲಿಯೇ ಕಾಯಿಸಬೇಡಿ. ಸಮಯಕ್ಕೆ ಮೊದಲೇ ನೀವು ನಿಗದಿಪಡಿಸಿದ ಜಾಗಕ್ಕೆ ಹೋಗಿ.

ಮೊದಲ ಭೇಟಿಗೆ ನೀವಿಬ್ಬರೆ ಹೋಗಿ. ಸ್ನೇಹಿತರನ್ನು ಕರೆದುಕೊಂಡು ಹೋಗಬೇಡಿ. ಅಥವಾ ಸ್ನೇಹಿತರು ಸಿಗುವ ಜಾಗಕ್ಕೆ ಹೋಗಬೇಡಿ. ಅಲ್ಲಿ ಶಾಂತವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...