alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬರ್ತಿದೆ ‘ಎಸಿ ಜಾಕೆಟ್’

ac-jacket_650x400_81488905061-1

ಎಲ್ಲಾ ಸಮಯದಲ್ಲೂ, ಎಲ್ಲಾ ಕಡೆಗಳಲ್ಲೂ ನಿಮ್ಮನ್ನು ತಣ್ಣಗಿಡುತ್ತೆ, ಕೊರೆಯುವ ಚಳಿಯಲ್ಲಿ ಬೆಚ್ಚಗೆ ಮಾಡುತ್ತೆ. ಯಾಕಂದ್ರೆ ಇದೊಂದು ಎಸಿ ಜಾಕೆಟ್. ಸಚಿವ ಗಿರಿರಾಜ್ ಸಿಂಗ್ ಈ ಜಾಕೆಟ್ ಅನ್ನು ಬಿಡುಗಡೆ ಮಾಡಿದ್ದಾರೆ. ಖನ್ವಾದ ಹತ್ತಿಯಿಂದ ಈ ಜಾಕೆಟ್ ತಯಾರಿಸಲಾಗಿದೆ.

ಸೆಲ್ಫ್ ಕೂಲಿಂಗ್ ಲೆನಿನ್ ಜಾಕೆಟ್ ನಲ್ಲಿ 2 ಆಯ್ಕೆಗಳಿವೆ. ಕೆಂಪು ಬಟನ್ ಒತ್ತಿದ್ರೆ ಬಿಸಿಯಾಗುತ್ತದೆ, ಹಸಿರು ಬಟನ್ ಒತ್ತಿದ್ರೆ ತಂಪಾಗುತ್ತದೆ. ಅಂತಹ ತಂತ್ರಜ್ಞಾನವನ್ನು ಈ ಜಾಕೆಟ್ ನಲ್ಲಿ ಅಳವಡಿಸಲಾಗಿದೆ. ಕೋಲ್ಡ್ ಮತ್ತು ಹಾಟ್ ಏರ್ ಫ್ಯಾನ್ ಗಳು ಇದರಲ್ಲಿವೆ.

ಈ ಜಾಕೆಟ್ ಗಾಗಿ ಎಂಐಟಿ ಪದವೀಧರನೊಬ್ಬ ಕ್ಲೈಮೇಟ್ ಗೇರ್ ತಂತ್ರಜ್ಞಾನದ ಡಿವೈಸ್ ಅನ್ನು ತಯಾರಿಸಿಕೊಟ್ಟಿದ್ದಾನೆ. ಸಿಯಾಚಿನ್ ನಲ್ಲಿ ಗಡಿಕಾಯುವ ಯೋಧರಿಗೆ ಈ ಜಾಕೆಟ್ ಒದಗಿಸೋದಾಗಿ ಗಿರಿರಾಜ್ ಸಿಂಗ್ ತಿಳಿಸಿದ್ದಾರೆ. ಸದ್ಯದಲ್ಲೇ ಈ ಜಾಕೆಟ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಹಾಫ್ ಜಾಕೆಟ್ ಗೆ 18,000 ರೂ. ಹಾಗೂ ಫುಲ್ ಸ್ಲೀವ್ಸ್ ಜಾಕೆಟ್ ಗೆ 25,000 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...