alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಅಪ್ ನೋವನ್ನು ಕಡಿಮೆ ಮಾಡುತ್ತೆ ಈ ಉಪಾಯ

ಪ್ರೀತಿ ಮುರಿದು ಬಿದ್ದ ನಂತ್ರ ಬೇಸರವಾಗೋದು ಸಾಮಾನ್ಯ. ನೋವು, ದುಃಖ, ಹತಾಶೆಯನ್ನು ಕೆಲವರು ತಿಂಗಳು, ವರ್ಷದೊಳಗೆ ಗೆದ್ದು ವಾಪಸ್ ಬರ್ತಾರೆ. ಮತ್ತೆ ಕೆಲವರು ಜೀವನ ಪೂರ್ತಿ ನೋವನುಭವಿಸ್ತಾರೆ. ಈ ಬ್ರೇಕ್ ಅಪ್ ನಿಂದಲೂ ಸಾಕಷ್ಟು ಲಾಭವಿದೆ. ಸಂಬಂಧದಲ್ಲಿದ್ದಾಗ ಅನುಭವಿಸಲಾಗದ ಕೆಲವನ್ನು ಬ್ರೇಕ್ ಅಪ್ ನಂತ್ರದ ದಿನಗಳು ನೀಡುತ್ವೆ.

ನಿಮಗಿಷ್ಟವಾಗುವ ಬಟ್ಟೆಯನ್ನು ನೀವು ಬ್ರೇಕ್ ಅಪ್ ನಂತ್ರ ಧರಿಸಬಹುದು. ಅದನ್ನು ಹಾಕಬೇಡ, ಇದನ್ನು ಹಾಕಬೇಡ ಎನ್ನುವವರು ಯಾರೂ ಇರುವುದಿಲ್ಲ. ಸಂಗಾತಿಗೆ ಈ ಬಣ್ಣ ಇಷ್ಟವಿಲ್ಲ ಎನ್ನುವ ಕಾರಣಕ್ಕೆ ಕಪಾಟಿನಲ್ಲಿಟ್ಟ ಬಟ್ಟೆಯನ್ನು ಹೊರಗೆ ತೆಗೆಯಬಹುದು.

ಸುಖ ನಿದ್ರೆಗೆ ಇದೊಂದು ಒಳ್ಳೆ ಅವಕಾಶ. ಸಂಗಾತಿ ಜೊತೆ ಮಾತನಾಡ್ತಾ ರಾತ್ರಿ ಕಳೆದಿದ್ದು ತಿಳಿಯುತ್ತಿರಲಿಲ್ಲ. ಆದ್ರೀಗ ಸಂಗಾತಿಯಿಲ್ಲ. ಹಾಗಾಗಿ ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಏಳಬಹುದು. ಇದ್ರಿಂದ ಇಡೀ ದಿನ ನಿಮಗೆ ಕೆಲಸ ಮಾಡಲು ಸಿಗುತ್ತದೆ.

ಕುಟುಂಬವನ್ನು ಅರ್ಥ ಮಾಡಿಕೊಳ್ಳಲು ಸುವರ್ಣಾವಕಾಶ ನಿಮಗೆ ಸಿಕ್ಕಿದೆ ಎಂದುಕೊಳ್ಳಿ. ಮನೆಯವರ ಜೊತೆ ಸಮಯ ಕಳೆಯಿರಿ. ಹೊರಗೆ ಸುತ್ತಾಡಿ ಬನ್ನಿ. ಎಲ್ಲರೂ ಒಟ್ಟಿಗಿರುವ ಫೋಟೋ ತೆಗೆದು ಎಂಜಾಯ್ ಮಾಡಿ.

ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಹಾಗೂ ಹಳೆ ಸ್ನೇಹಿತರನ್ನು ಭೇಟಿಯಾಗಲು ಇದೊಳ್ಳೆ ಅವಕಾಶ. ಹಳೆ ಸ್ನೇಹಿತರನ್ನು ಭೇಟಿಯಾಗಿ. ಅವರ ಜೊತೆ ಸಮಯ ಕಳೆದು ನೋವನ್ನು ಮರೆಯಿರಿ.

ಏನನ್ನಾದ್ರೂ ಕಲಿಯಲು ಇದೊಂದು ಒಳ್ಳೆ ಅವಕಾಶ. ಸಂಗಾತಿ ಜೊತೆ ಸಮಯ ಕಳೆಯುತ್ತಿದ್ದ ನಿಮಗೆ ನಿಮಗಾಗಿ ಸಮಯ ಸಿಗ್ತಿರಲಿಲ್ಲ. ಮುಂದೆ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಹಾಗಾಗಿ ಈಗ್ಲೇ ಹೊಸತನ್ನು ಕಲಿಯಲು ಶುರು ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...