alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳ ದಿನದಂದು ಹೆಚ್ಚು ಖರ್ಚು ಮಾಡ್ತಾರೆ ಇವ್ರು

ಪ್ರೇಮಿಗಳ ದಿನಾಚರಣೆಗೆ ವಿಶ್ವದಾದ್ಯಂತ ತಯಾರಿ ನಡೆಯುತ್ತಿದೆ. ಈ ದಿನವನ್ನು ಸ್ಮರಣೀಯವಾಗಿಡಲು ಜನರು ಏನೇನೋ ಮಾಡ್ತಾರೆ. ಸರ್ವೆಯೊಂದರ ಪ್ರಕಾರ ವ್ಯಾಲಂಟೈನ್ಸ್ ಡೇ ಗಾಗಿ ಹೆಚ್ಚು ಖರ್ಚು ಮಾಡುವವರು ಹುಡುಗರಂತೆ.

ದೇಶದಾದ್ಯಂತ ನಡೆದ ಈ ಸಮೀಕ್ಷೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸಮೀಕ್ಷೆ ಪ್ರಕಾರ ಪ್ರೇಮಿಗಳ ದಿನದಂದು ಪ್ರೇಮಿಯನ್ನು ಖುಷಿಯಾಗಿಡಲು ಹಾಗೂ ಈ ದಿನ ಸದಾ ನೆನಪಿರಲಿ ಎನ್ನುವ ಕಾರಣಕ್ಕೆ ಹುಡುಗ್ರು ಹೆಚ್ಚು ಖರ್ಚು ಮಾಡ್ತಾರಂತೆ.

ಹುಡುಗ್ರು ಸರಾಸರಿ 4 ಸಾವಿರ ರೂಪಾಯಿ ಖರ್ಚು ಮಾಡಿದ್ರೆ ಹುಡುಗಿಯರು ಸರಾಸರಿ 2 ಸಾವಿರ ರೂಪಾಯಿ ಖರ್ಚು ಮಾಡ್ತಾರಂತೆ. ಸರ್ವೆ ಪ್ರಕಾರ, ಶೇಕಡಾ 23 ರಷ್ಟು ಪುರುಷರು, ಗರ್ಲ್ಫ್ರೆಂಡ್ ಗಾಗಿ ಬಂಗಾರ ಖರೀದಿ ಮಾಡ್ತಾರಂತೆ. ಶೇಕಡಾ 20ರಷ್ಟು ಮಂದಿ ಡಿನ್ನರ್ ಗೆ ಹೋಗ್ತಾರಂತೆ. ಶೇಕಡಾ 14ರಷ್ಟು ಮಂದಿ ಉಡುಗೊರೆ ರೂಪದಲ್ಲಿ ಕಾರ್ಡ್ ನೀಡ್ತಾರಂತೆ. ಶೇಕಡಾ 12ರಷ್ಟು ಮಂದಿ ಪ್ರೇಮಿಗೆ ಚಾಕಲೇಟ್ ನೀಡ್ತಾರಂತೆ.

ಶೇಕಡಾ 81ರಷ್ಟು ಹುಡುಗ್ರು ಆಫರ್ ನೋಡಿ ಆನ್ಲೈನ್ ನಲ್ಲಿ ಗಿಫ್ಟ್ ಖರೀದಿ ಮಾಡ್ತಾರಂತೆ. ಶೇಕಡಾ 78ರಷ್ಟು ಮಂದಿ ಸೇಲ್ ಅಥವಾ ರಿಯಾಯಿತಿ ಮಳಿಗೆಗೆ ಹೋಗ್ತಾರಂತೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...