alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಅಪ್ ಬಳಿಕ ನೋವು ಅನುಭವಿಸುವವರ್ಯಾರು?

break-up

ಸಂಬಂಧಗಳನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಒಂದು ಸವಾಲು. ಅದರಲ್ಲೂ ಪ್ರೀತಿ-ಪ್ರೇಮ ಅಂದ್ಮೇಲೆ ಬ್ರೇಕ್ ಅಪ್ ಅಪಾಯ ಇದ್ದಿದ್ದೇ. ಪ್ರೀತಿಯಲ್ಲಿ ಬಿದ್ದಮೇಲೆ ವಿಶ್ವಾಸ, ನಂಬಿಕೆ ಉಳಿಸಿಕೊಂಡು ಸಂಬಂಧವನ್ನು ಮುಂದುವರಿಸೋದೋ ಸುಲಭವಲ್ಲ.

ಪ್ರೀತಿ, ಮದುವೆಯಲ್ಲಿ ಪರ್ಯಾವಸಾನವಾಗುವ ಮುನ್ನವೇ ಮುರಿದು ಬಿದ್ದ ಅದೆಷ್ಟೋ ಉದಾಹರಣೆಗಳಿವೆ. ಸಾಮಾನ್ಯವಾಗಿ ಬ್ರೇಕ್ ಅಪ್ ಆದಾಗಲೆಲ್ಲ ಯುವತಿಯರೇ ಹೆಚ್ಚು ನೊಂದುಕೊಳ್ತಾರೆ, ಅದರಿಂದ ಹೊರಬರಲು ಕಷ್ಟಪಡ್ತಾರೆ ಅನ್ನೋ ಭಾವನೆ ಇದೆ.

ಆದ್ರೆ ಹೊಸ ಸಂಶೋಧನೆಯ ಪ್ರಕಾರ ಇದು ಸತ್ಯವಲ್ಲ. ಬ್ರೇಕ್ ಅಪ್ ಆದಾಗ ಹೆಚ್ಚು ನೋವು ಅನುಭವಿಸುವವರು ಯುವಕರು, ಹಳೆಯದನ್ನು ಮರೆಯಲು ಅವರು ತುಂಬಾನೇ ಕಷ್ಟಪಡ್ತಾರಂತೆ. ವಿಚ್ಛೇದಿತ ಜೋಡಿಗಳನ್ನು ಸಂಶೋಧನೆಗೆ ಒಳಪಡಿಸಿ ಈ ತೀರ್ಮಾನಕ್ಕೆ ಬರಲಾಗಿದೆ.

ವಿಚ್ಛೇದನದ ನಂತರ ಮಹಿಳೆ ಬಹಿರ್ಮುಖ ನಡವಳಿಕೆ ತೋರಿಸಿದ್ದಾಳೆ, ಎಲ್ಲವನ್ನೂ ಮರೆತು ಮುಂದೆ ಸಾಗುವ ಆತ್ಮವಿಶ್ವಾಸ ಅವಳಲ್ಲಿತ್ತು. ಹಳೆಯದನ್ನೆಲ್ಲ ಬಹುಬೇಗ ಮರೆತುಬಿಟ್ಟಿದ್ದಳು. ಆದ್ರೆ ವಿಚ್ಛೇದನ ಪಡೆದ ಪುರುಷ ಮಾತ್ರ ಇನ್ನೂ ಆ ನೋವಿನಿಂದ ಹೊರಬಂದಿರಲಿಲ್ಲ. ಅವನಲ್ಲಿ ಭಾವನಾತ್ಮಕ ಅಸ್ಥಿರತೆಯಿತ್ತು. ಬ್ರೇಕ್ ಅಪ್ ನಂತರ ತಾವು ಕಳೆದುಕೊಂಡಿರುವುದರ ಬಗ್ಗೆ ಪುರುಷರು ಹೆಚ್ಚು ಯೋಚಿಸ್ತಾರಂತೆ. ಹಾಗಾಗಿಯೇ ಆ ಶಾಕ್ ನಿಂದ ಹೊರಬರಲು ಅವರಿಗೆ ಬಹಳಷ್ಟು ಸಮಯ ಹಿಡಿಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...