alex Certify
ಕನ್ನಡ ದುನಿಯಾ       Mobile App
       

Kannada Duniya

ಸಮುದ್ರವನ್ನು ಸ್ವಚ್ಛಗೊಳಿಸುತ್ತೆ ವೇಸ್ಟ್ ಶಾರ್ಕ್

MEET ‘WASTE SHARK’, THE DRONE THAT’S PICKING UP GARBAGE FROM THE OCEANS

ನದಿ ಹಾಗೂ ಸಮುದ್ರಗಳ ಮಾಲಿನ್ಯವನ್ನು ತಡೆಗಟ್ಟಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೇ ನಿಟ್ಟಿನಲ್ಲಿ ಹಾಲೆಂಡ್ ‘ವೇಸ್ಟ್ ಶಾರ್ಕ್’ ಎಂಬ ಒಂದು ಹೊಸ ತಂತ್ರಜ್ಞಾನ ಕಂಡುಹಿಡಿದಿದೆ.

ನೋಡುಗರ ಕಣ್ಣಿಗೆ ಶಾರ್ಕ್ ಮೀನಿನಂತೆ ಗೋಚರಿಸುವ ಈ ಡ್ರೋನ್, ಸಮುದ್ರ ಮತ್ತು ನದಿಗಳನ್ನು ಸ್ವಚ್ಛಗೊಳಿಸುತ್ತದೆ. ಡಚ್ ಬಂದರು ಪ್ರಾಧಿಕಾರದ ಸಹಕಾರದಿಂದ ರ್ಯಾನ್ ಮೆರಿನ್ ತಂತ್ರಜ್ಞಾನ ಸಂಸ್ಥೆ ಈ ಹೊಸ ಮಾದರಿಯ ಡ್ರೋನ್ ತಯಾರಿಸಿದೆ. ಕಸಕಡ್ಡಿಗಳನ್ನು ತೆಗೆಯುವುದರ ಜೊತೆಗೆ ಇದು ನೀರಿನ ಗುಣಮಟ್ಟ, ಹವಾಮಾನ, ನೀರಿನ ಆಳ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ತಂತ್ರಜ್ಞರು ಈಗಾಗಲೇ ಎರಡು ಗಾತ್ರದ ವೇಸ್ಟ್ ಶಾರ್ಕ್ ಅನ್ನು ತಯಾರಿಸಿದ್ದಾರೆ. ದೊಡ್ಡ ಗಾತ್ರದ ಶಾರ್ಕ್ ಪ್ರತಿಗಂಟೆಗೆ 500 ಕಿಲೋ ಕಸವನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಹಾಲೆಂಡಿನ ರಾಟರ್ಡಾಮ್ ಬಂದರಿನಲ್ಲಿ 4 ಶಾರ್ಕ್ ಗಳನ್ನು ಪ್ರಯೋಗಾರ್ಥವಾಗಿ ಬಿಡಲಾಗಿದೆ. ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾದಲ್ಲಿ ವೇಸ್ಟ್ ಶಾರ್ಕ್ ಮಾರುಕಟ್ಟೆಗೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...