alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಜಾಬಿನ ‘ಇಕೊ ಬಾಬಾ’; ಸ್ವಚ್ಛತೆಯ ಹರಿಕಾರ

santseechewal3

ಸ್ಚಚ್ಛತೆ ಕುರಿತು ಅರಿವು ಮೂಡಿಸಲು ನಡೆಯುತ್ತಿರುವ ಪ್ರಯತ್ನ ಎಲ್ಲರಿಗೂ ತಿಳಿದೇ ಇದೆ. ಆದರೆ ಪಂಜಾಬಿನ ಈ ಏಕವ್ಯಕ್ತಿಯ ಹೋರಾಟ, ಸಾಧನೆ ಹಾಗೂ ಪರಿಸರದ ಮೇಲೆ ಅವರಿಗಿರುವ ಕಾಳಜಿ ಬಹುಶಃ ಬಹಳಷ್ಟು ಜನಕ್ಕೆ ಗೊತ್ತಿಲ್ಲ.

‘ಇಕೊ ಬಾಬಾ’ ಎಂದೇ ಖ್ಯಾತರಾಗಿರುವ ಬಲ್ಬೀರ್ ಸಿಂಗ್ ಸೀಚೆವಾಲ್ ಪಂಜಾಬದವರು. ಇವರ ಪ್ರಯತ್ನದಿಂದಲೇ ಪವಿತ್ರವಾದ ಕಾಲೇ ಬೇನ್ ನದಿ ಮತ್ತೆ ಜೀವ ತಳೆದಿದೆ. ಸುಮಾರು 160 ಕಿ.ಮೀ. ಉದ್ದವಿರುವ ಈ ನದಿ ಪಂಜಾಬಿನ ದೌಬಾ ಪ್ರಾಂತ್ಯದಲ್ಲಿ ಹರಿಯುತ್ತದೆ. ಇದು ಕಳೆದ ಸುಮಾರು ವರ್ಷಗಳಿಂದ ಗಿಡಗಳಿಂದ ತುಂಬಿಹೋಗಿತ್ತು. ಇದರಿಂದ ಸುತ್ತಮುತ್ತಲ ಕೃಷಿಕರಿಗೆ ನೀರಿನ ಅಭಾವವುಂಟಾಯ್ತು.

ಅಂತಹ ಸಮಯದಲ್ಲಿ ಬಲ್ಬೀರ್ ಸಿಂಗ್, ಆ ಊರಿನವರಿಗೆ ದಾರಿದೀಪವಾದರು. ಜನರಲ್ಲಿ ನೀರಿನ ಮತ್ತು ಪರಿಸರದ ಶುಚಿತ್ವದ ಕುರಿತು ಅರಿವು ಮೂಡಿಸಿದರು. ಬಲ್ಬೀರ್ ಸಿಂಗ್ ಸುತ್ತ 24 ಹಳ್ಳಿಯ ಜನರನ್ನೆಲ್ಲ ಒಗ್ಗೂಡಿಸಿ ತಾವೇ ಸ್ವತಃ ನಿಂತು ಕಾಲೇಬೇನ್ ನದಿಯ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿದರು. ಪಂಜಾಬ್ ಸರಕಾರದ ನೆರವಿನಿಂದ ಒಳಚರಂಡಿ ವ್ಯವಸ್ಥೆಯನ್ನು ಮಾಡಿದರು. ಬಲ್ಬೀರ್ ಅವರ ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಭಾರತವಲ್ಲದೇ ಹೊರ ದೇಶಗಳಲ್ಲಿ ಕೂಡ ಹೊಗಳಿಕೆಗೆ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...