alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಸಿದ್ಧ ಕೇಶ ವಿನ್ಯಾಸಕನ ಬಳಿ ಇವೆ 500 ಕಾರುಗಳು…!

ಮರ್ಸಿಡಿಸ್ ಬೆಂಜ್, ರೋಲ್ಸ್ ರಾಯ್ಸ್, ಬಿಎಂಡಬ್ಲ್ಯು. ನೀವು ಯಾವ ಕಾರಿನ ಹೆಸರು ಹೇಳ್ತಿರೋ ಹೇಳಿ. ಅಷ್ಟು ಕಾರುಗಳ ಸಂಗ್ರಹ ಇವರ ಬಳಿ ಇವೆ. ಖ್ಯಾತ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ಅಮೀರ್ ಖಾನ್, ಕಮಲ್ ಹಾಸನ್ ಸೇರಿದಂತೆ ಅನೇಕ ನಟರು ಇವರ ಕಾರನ್ನು ಬಳಸಿದ್ದಾರೆ. ಅಂದ ಹಾಗೆ ಇವರ ಹೆಸರು ರಮೇಶ್ ಬಾಬು.

ಖ್ಯಾತ ಕೇಶ ವಿನ್ಯಾಸಕರಾಗಿ ಗುರುತಿಸಿಕೊಂಡಿರುವ ರಮೇಶ್ ಬಾಬು ತಮ್ಮ ಪರಿಶ್ರಮದಿಂದ ಈಗ ಯಶಸ್ಸಿನ ಶಿಖರ ಏರಿದ್ದಾರೆ. ಒಂದು ಕಾಲದಲ್ಲಿ ದಿನದ ಅಗತ್ಯಗಳನ್ನು ಪೂರೈಸಿಕೊಳ್ಳೋದಕ್ಕೂ ಕಷ್ಟ ಪಡುತ್ತಿದ್ದ ರಮೇಶ್ ಬಾಬು ಅವರ ಜೀವನಗಾಥೆ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು. ತಂದೆಯ ನಿಧನದ ಬಳಿಕ ಚಿಕ್ಕಪ್ಪನ ಕ್ಷೌರದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ ರಮೇಶ್ ಬಾಬು ಆನಂತರದಲ್ಲಿ ಗ್ರಾಹಕರಿಗೆ ತಮ್ಮ ವಿಭಿನ್ನ ಕೇಶ ವಿನ್ಯಾಸದ ಮೂಲಕ ಇಷ್ಟವಾಗಿಬಿಟ್ಟರು.

ಸಿಂಗಾಪುರದ ಕೇಶ ವಿನ್ಯಾಸ ಅಕಾಡೆಮಿಯಲ್ಲಿ ತರಬೇತಿ ಪಡೆದು ವಾಪಸ್ಸು ಬಂದ ಮೇಲೆ ರಮೇಶ್ ಬಾಬು ಅವರ ಜೀವನದಲ್ಲಿ ಒಳ್ಳೆಯ ದಿನಗಳು ಶುರುವಾದವು. ಕೇಶ ವಿನ್ಯಾಸದ ಜೊತೆಗೆ ಟ್ರಾವೆಲ್ಸ್ ವ್ಯವಹಾರ ಶುರುಮಾಡಿದ ರಮೇಶ್ ಬಾಬು ಇದೀಗ ಮುಂಬೈ, ಬೆಂಗಳೂರು, ಚೆನ್ನೈ, ದೆಹಲಿಯಲ್ಲೂ ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಂಡಿದ್ದಾರೆ. 500ಕ್ಕೂ ಹೆಚ್ಚು ಕಾರುಗಳಿದ್ರೂ ಮೊದಲು ತಾವು ಕೊಂಡಂತಾ ಮಾರುತಿ 800 ಇವತ್ತಿಗೂ ತಮ್ಮ ನೆಚ್ಚಿನ ಕಾರು ಅಂತಾರೆ ರಮೇಶ್ ಬಾಬು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...