alex Certify
ಕನ್ನಡ ದುನಿಯಾ       Mobile App
       

Kannada Duniya

ನೀತಾ ಅಂಬಾನಿ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

neeta ambani

ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ ಮುಖೇಶ್ ಅಂಬಾನಿ ಪತ್ನಿಯಾಗಿರುವ, ರಿಲಯನ್ಸ್ ಪ್ರತಿಷ್ಠಾನದ ಅಧ್ಯಕ್ಷೆ ನೀತಾ ಅಂಬಾನಿ ಫೋರ್ಬ್ಸ್ ಪ್ರಕಟಿಸಿದ ಏಷ್ಯಾದ ಪ್ರಭಾವಶಾಲಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ವಿಶ್ವದಲ್ಲಿ ಮಹಿಳೆಯರು ತೀವ್ರ ಸ್ಪರ್ಧೆ ಎದುರಿಸಿದರೂ, ಉತ್ತಮ ರೀತಿಯಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ. ಹೀಗಿದ್ದರೂ, ಲಿಂಗ ಅಸಮಾನತೆಯನ್ನು ಎದುರಿಸುವ ಪರಿಸ್ಥಿತಿ ಇದೆ. ಇದೆಲ್ಲವನ್ನೂ ಮೀರಿ ಮಹಿಳೆಯರು ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಫೋರ್ಬ್ಸ್ ಹೇಳಿದೆ. ನೀತಾ ಅಂಬಾನಿ ಏಷ್ಯಾ ಪ್ರಭಾವಶಾಲಿ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ್ದು, ಮುಖೇಶ್ ಅಂಬಾನಿಯವರ ಯಶಸ್ಸಿನಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಲಾಗಿದೆ.

ನೀತಾ ಅಂಬಾನಿ ಮೊದಲ ಸ್ಥಾನದಲ್ಲಿದ್ದರೆ, ಎಸ್.ಬಿ.ಐ. ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ 2ನೇ ಸ್ಥಾನದಲ್ಲಿದ್ದಾರೆ. ಸಿಗ್ಮಾ ಸಿಇಓ ಅಂಬಿಕಾ ಧೀರಜ್ 14ನೇ, ವೆಲ್ ಸ್ಪೂನ್ ಇಂಡಿಯಾ ಸಿಇಓ ದೀಪಾಲಿ ಗೋಯೆಂಕಾ 16ನೇ ಹಾಗೂ ಕಿರಣ್ ಮಜುಂದಾರ್ ಶಾ 28ನೇ ಸ್ಥಾನದಲ್ಲಿದ್ದು, ಒಟ್ಟು ಭಾರತದ 8 ಮಂದಿ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...