alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರನ್ನು ನಿತ್ಯ ಪೂಜಿಸ್ತಾನೆ ಈ ಬಾಲಕ

modi-bhakar-600-22-1474535104ಪ್ರಧಾನಿ ಮೋದಿಯವರ ಅಭಿಮಾನಿ ಬಳಗ ದೊಡ್ಡದು. ಸಾಮಾಜಿಕ ಜಾಲತಾಣಗಳಲ್ಲೂ ಮೋದಿಯವರನ್ನು ಫಾಲೋ ಮಾಡುವ ಅಸಂಖ್ಯಾತ ಮಂದಿಯಿದ್ದಾರೆ. ಆದರೆ ಈ ಪುಟ್ಟ ಬಾಲಕನ ಮೋದಿಯವರ ಮೇಲಿನ ಅಭಿಮಾನ ಮಾತ್ರ ವಿಭಿನ್ನವಾಗಿದೆ. ಈತ ಮೋದಿಯವರನ್ನು ನಿತ್ಯ ಪೂಜಿಸುತ್ತಾನೆ.

12 ವರ್ಷದ ಕಾರ್ತಿಕ್ ಎಂಬಾತ ಮೋದಿಯವರ ಕಟ್ಟಾ ಅಭಿಮಾನಿ. ಉತ್ತರ ಪ್ರದೇಶದ ಶಹಜಹಾಂಪುರ ನಿವಾಸಿಯಾದ ಕಾರ್ತಿಕ್, ಮನೆಯ ದೇವರ ಕೋಣೆಯಲ್ಲಿ ನರೇಂದ್ರ ಮೋದಿಯವರ ಫೋಟೋವಿದೆ. ಆ ಫೋಟೋಕ್ಕೆ ಕಾರ್ತಿಕ್ ಪ್ರತಿನಿತ್ಯ ಬೆಳಿಗ್ಗೆ ಪೂಜೆ ಸಲ್ಲಿಸುತ್ತಾನೆ. ಮೋದಿಯವರನ್ನು ಪೂಜಿಸದೇ ಈತ ಆಹಾರ ಕೂಡಾ ಸೇವಿಸುವುದಿಲ್ಲ.

ಮೋದಿಯವರಂತ ವ್ಯಕ್ತಿ ಇನ್ನೊಬ್ಬರಿಲ್ಲ. ಅವರೇ ಈ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ ಎಂಬುದು ಕಾರ್ತಿಕ್ ಅಭಿಮತ. ಮೋದಿಯವರನ್ನು ಪೂಜಿಸುವುದಲ್ಲದೇ ಈತ ಮೋದಿಯವರ ಕುರಿತಾದ ಅನೇಕ ಕವನಗಳನ್ನು ಕೂಡ ರಚಿಸಿದ್ದಾನೆ. ಮೋದಿಯವರನ್ನು ಭೇಟಿಯಾಗಿ ಅವರ ಕುರಿತು ರಚಿಸಿದ ಕವನಗಳನ್ನು ಓದಿ ಹೇಳುವ ಬಯಕೆ ಕಾರ್ತಿಕನದ್ದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...