alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಿಗಳಿಂದ ಪಡೆಯಲಾಗುವ ಔಷಧಗಳು

Antibiotic

ಪ್ರಾಣಿಗಳಿಂದ ಮನುಷ್ಯರಿಗೆ ಹಾಲು, ಮೊಟ್ಟೆ, ಮಾಂಸ, ಗೊಬ್ಬರ ಮುಂತಾದ ಅನೇಕ ಉಪಯುಕ್ತ ಪದಾರ್ಥಗಳು ದೊರೆಯುತ್ತವೆ. ಮನುಷ್ಯ ತನ್ನ ಆಸೆಯನ್ನು ಈಡೇರಿಸುವುದಕ್ಕಾಗಿ ಪ್ರಾಣಿ, ಪಕ್ಷಿಗಳನ್ನು ಬಲಿಕೊಡುವ ಉದಾಹರಣೆಗಳೂ ಬೇಕಾದಷ್ಟಿವೆ. ನಮಗಾಗಿ ಜೀವ ಕೊಡುವ ಇಂತಹ ಪ್ರಾಣಿಗಳು ನಮ್ಮ ರೋಗಗಳನ್ನು ಗುಣಪಡಿಸಲು ಕೂಡ ಉಪಯೋಗವಾಗುತ್ತವೆ.

ನಮ್ಮ ಅಂಗಾಂಗಗಳನ್ನು ಚುರುಕುಗೊಳಿಸುವಂತಹ ಬಹುತೇಕ ಔಷಧಗಳನ್ನು (Hormonal Medicines) ಪ್ರಾಣಿಗಳಿಂದಲೇ ಪಡೆಯುತ್ತೇವೆ. ಹೃದ್ರೋಗದ ಚಿಕಿತ್ಸೆಗೆ ಮತ್ತು ಉಬ್ಬಸ ರೋಗಿಗಳಿಗೆ ಬಳಸಲಾಗುವ ಎಪೈನ್ಫೆರಿಲ್ (Epinepherin) ಎಂಬ ಔಷಧವನ್ನು ಬಹುತೇಕ ಸಂದರ್ಭಗಳಲ್ಲಿ ಬೆಕ್ಕುಗಳ ಮತ್ತು ಹಂದಿಗಳ ಮೂತ್ರಜನಕಾಂಗಗಳ ಮೇಲ್ಗಡೆ ಇರುವ ನಿರ್ನಾಳ ಗ್ರಂಥಿಗಳಿಂದ ತೆಗೆಯುತ್ತಾರೆ.

ಥೈರಾಕ್ಸಿನ್ ಎಂಬ ಔಷಧವನ್ನು ಬೆಕ್ಕಿನ ಥೈರಾಯ್ಡ್ ಗ್ರಂಥಿಗಳಿಂದ ತೆಗೆಯಲಾಗುತ್ತದೆ. ಸಿಹಿಮೂತ್ರ ರೋಗಿಗಳು ಬಳಸುವ ಅನಿಮಲ್ ಇನ್ಸುಲಿನ್ ಅನ್ನು ಬೆಕ್ಕು ಮತ್ತು ಹಂದಿಯ ಮೇದೋಜೀರಕ ಗ್ರಂಥಿಗಳು ಸ್ರವಿಸುವ ದ್ರವದಿಂದ ತಯಾರಿಸಲಾಗುತ್ತದೆ. ಪೊಲಿಯೋ ಲಸಿಕೆಯನ್ನು ಕೋತಿಯ ಮೂತ್ರಪಿಂಡದಿಂದ ಹೊರತೆಗೆದ ಪೊಲಿಯೋ ವೈರಸ್ ಬಳಸಿ ತಯಾರಿಸುತ್ತಾರೆ.

ಹೀಗೆ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಪ್ರಾಣಿಗಳು ನಮಗೆ ಸಹಾಯ ಮಾಡುತ್ತವೆ. ಔಷಧಗಳ ಹೊರತಾಗಿ ಅನೇಕ ವೈದ್ಯಕೀಯ ಸಂಶೋಧನೆಗಳಲ್ಲಿ ಕೂಡ ಪ್ರಾಣಿಗಳು ಬಳಕೆಯಾಗುತ್ತವೆ. ತಯಾರಾದ ಔಷಧಗಳು ಎಷ್ಟು ಪರಿಣಾಮಕಾರಿ ಎಂಬುದನ್ನು ತಿಳಿಯಲು ಅದನ್ನು ಪ್ರಾಣಿಗಳ ಮೇಲೇ ಪ್ರಯೋಗ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...