alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟಿ ವೃದ್ಧೆಗೆ ಹುಟ್ಟುಹಬ್ಬದ ಖುಷಿ ಕೊಟ್ಟ ಖಾಕಿ ಪಡೆ….

mummy-birthday

83ರ ಹರೆಯದ ಲಲಿತಾ ಸುಬ್ರಮಣ್ಯಂ ಸೆಂಟ್ರಲ್ ಮುಂಬೈನ ವಡಾಲಾದಲ್ಲಿ ವಾಸವಾಗಿದ್ದಾರೆ. ಕಳೆದ 25 ವರ್ಷಗಳಿಂದ ಲಲಿತಾ ಒಬ್ಬಂಟಿ. ಇಬ್ಬರು ಮಕ್ಕಳು ಅಮೆರಿಕದಲ್ಲಿ ಹಾಗೂ ಮತ್ತೊಬ್ಬ ಮಗ ಬೆಂಗಳೂರಲ್ಲಿ ನೆಲೆಸಿದ್ದಾರೆ.

ಒಂಟಿಯಾಗಿರೋ ವೃದ್ಧೆಗೆ ಕಾಳಜಿ ಹಾಗೂ ರಕ್ಷಣೆ ಬೇಕಾಗಿರೋದ್ರಿಂದ ಪೊಲೀಸರೇ ಅವರಿಗೆ ಆಸರೆ. ಅವರಿಗೆ ಔಷಧ ಖರೀದಿಗೆ, ಬ್ಯಾಂಕ್ ವಹಿವಾಟುಗಳಿಗೆ ಪೊಲೀಸರೇ ನೆರವಾಗ್ತಾರೆ. ಸೋಮವಾರ ಬೆಳಗ್ಗೆ ಮನೆ ಬಾಗಿಲಲ್ಲಿ ಪೊಲೀಸರನ್ನು ಕಂಡು ಲಲಿತಾ ಅವರಿಗೆ ಅಚ್ಚರಿ.

ನಿನ್ನೆ ಲಲಿತಾ ಅವರ 83ನೇ ಹುಟ್ಟುಹಬ್ಬ. ಪೊಲೀಸರು ಕೇಕ್ ಹಾಗೂ ಹೂವಿನ ಬೊಕೆಗಳನ್ನು ಹೊತ್ತು ಲಲಿತಾ ಅವರಿಗೆ ಶುಭಾಶಯ ಕೋರಲು ಬಂದಿದ್ರು. ಮಾತುಂಗಾ ಠಾಣೆಯ ಡಿಸಿಪಿ ಅಶೋಕ್ ಖುಡೆ, ಇನ್ಸ್ ಪೆಕ್ಟರ್ ಬಿ.ಎಂ.ಕಕಡ್ ಹಾಗೂ ಪೇದೆಗಳ ಸಮ್ಮುಖದಲ್ಲಿ ಲಲಿತಾ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡ್ರು.

ಆಕೆ ನಮ್ಮ ತಾಯಿಯಿದ್ದಂತೆ, ಅವರ ಹುಟ್ಟುಹಬ್ಬ ಆಚರಿಸಿದ್ದು ಖುಷಿ ಕೊಟ್ಟಿದೆ ಅಂತಾ ಮಾತುಂಗಾ ಪೊಲೀಸರು ಹೇಳಿದ್ದಾರೆ. ಒಂಟಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರಿಗಾಗಿಯೇ ಪೊಲೀಸ್ ಇಲಾಖೆಯಲ್ಲಿ 1090 ಸಂಖ್ಯೆಯ ಸಹಾಯವಾಣಿ ಆರಂಭಿಸಲಾಗಿದೆ. ಏನಾದ್ರೂ ಸಹಾಯ ಬೇಕಾದಲ್ಲಿ ಅಥವಾ ಒಂಟಿತನ ಬಾಧಿಸಿದಾಗಲೆಲ್ಲ ವೃದ್ಧರು ಕರೆಮಾಡಿ ಪೊಲೀಸರ ಸಹಾಯ ಪಡೆಯಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...