alex Certify
ಕನ್ನಡ ದುನಿಯಾ       Mobile App
       

Kannada Duniya

ಒತ್ತಡ ಕಡಿಮೆ ಮಾಡಿಕೊಳ್ಳಲು ಇದಂತೆ ಬೆಸ್ಟ್..!

stress

ತೀವ್ರ ಪೈಪೋಟಿಯಿಂದ ಕೂಡಿದ ದುನಿಯಾ ಇದು. ಕ್ಷಣಕ್ಷಣಕ್ಕೂ ಹೊಸ ಹೊಸ ತಂತ್ರಜ್ಞಾನ, ಹೊಸ ಸವಾಲುಗಳು. ವೃತ್ತಿಯಲ್ಲಿ ಏನನ್ನಾದ್ರೂ ಸಾಧಿಸಬೇಕು ಅಂದ್ರೆ ಅದೇ ವೇಗಕ್ಕೆ ತಕ್ಕಂತೆ ಕೆಲಸ ಮಾಡಲೇಬೇಕು. ಹಾಗಾಗಿ ಉದ್ಯೋಗಿಗಳಿಗೆ ಒತ್ತಡ ಜಾಸ್ತಿ. ಅದನ್ನ ತಡೆಯೋಕಾಗ್ದೆ ಕೆಲವರು ಮಧ್ಯೆ ಮಧ್ಯೆ ಬ್ರೇಕ್ ತಗೊಂಡು ಧಮ್ ಹೊಡೀತಾರೆ, ಇನ್ನು ಕೆಲವರು ಕಾಫಿ-ಟೀ ಕುಡಿಯುತ್ತಾರೆ.

ವೈದ್ಯರೇ ಹೇಳುವ ಪ್ರಕಾರ ಒತ್ತಡ ನಿವಾರಣೆಗೆ ಲೈಂಗಿಕ ಕ್ರಿಯೆ ಬೆಸ್ಟ್ ಅಂತೆ. ಆದ್ರೆ ಕಚೇರಿ ಕೆಲಸದ ಮಧ್ಯೆ ಅದು ಅಸಾಧ್ಯ. ಹಾಗಾಗಿ ವಿರಾಮದ ಸಮಯದಲ್ಲಿ ಹಸ್ತಮೈಥುನ ಮಾಡಿದ್ರೆ ಒತ್ತಡ ನಿವಾರಿಸಿಕೊಳ್ಳಬಹುದು ಅಂತಾ ಹೊಸ ಸಂಶೋಧನೆಯೊಂದು ಹೇಳಿದೆ.

ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಂಡು ಹಸ್ತಮೈಥುನ ಮಾಡಿಕೊಂಡ್ರೆ ಒತ್ತಡ ಸಂಪೂರ್ಣ ನಿವಾರಣೆಯಾಗುತ್ತದೆ ಅಂತಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಟೆನ್ಷನ್ ಕಡಿಮೆಯಾಗಿ ಸಂತೋಷ ಹೆಚ್ಚುತ್ತದೆ, ಜೊತೆಗೆ ಆಕ್ರಮಣಶೀಲತೆ ಕಡಿಮೆಯಾಗಿ ಕೆಲಸದ ಮೇಲೆ ಗಮನ ಹೆಚ್ಚಾಗುತ್ತದೆ ಅನ್ನೋದು ಸಂಶೋಧನೆಯಿಂದ ಬಯಲಾಗಿದೆ. ನ್ಯೂಯಾರ್ಕ್ ನಲ್ಲಿ ಈಗಾಗ್ಲೇ ಶೇ.40 ರಷ್ಟು ಉದ್ಯೋಗಿಗಳು ಇಂತಹ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...