alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ….

ಸದ್ಯ ನೀವು ಹಸೆಮಣೆ ಏರ್ತಾ ಇದ್ದೀರಾ? ನಿಮ್ಮ ಸ್ನೇಹಿತರಲ್ಲಿ ಯಾರಾದ್ರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ? ಹಾಗಾದ್ರೆ ಈ ಸುದ್ದಿಯನ್ನು ತಪ್ಪದೆ ಓದಿ.

ಸಾಮಾನ್ಯವಾಗಿ ಮದುವೆಯಾಗುವ ಹುಡುಗ, ಹುಡುಗಿ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಕಾಡ್ತಾ ಇರುತ್ತವೆ. ಅರೆಂಜ್ ಮ್ಯಾರೇಜ್ ಆದಲ್ಲಿ ಮದುವೆಗೆ ಮೊದಲು ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಇದೇ ಕಾರಣಕ್ಕೆ ಕಾಡುತ್ತಿರುವ ಕೆಲ ಪ್ರಶ್ನೆಗಳನ್ನು ಹುಡುಗಿಯರು ಹುಡುಗರ ಬಳಿ ಕೇಳುವುದೇ ಇಲ್ಲ. ಕೆಲವೊಂದು ಪ್ರಶ್ನೆಗಳಿಗೆ ಸಿಕ್ಕ ಸಮಯದಲ್ಲಿಯೇ ಉತ್ತರ ಪಡೆಯುವುದುಂಟು. ಹಾಗಿದ್ರೆ ಹುಡುಗಿಯರು ಎಂಥ ಪ್ರಶ್ನೆಗಳನ್ನು ಮದುವೆಯಾಗುವ ಹುಡುಗನ ಮುಂದಿಡುತ್ತಾರೆ ಗೊತ್ತಾ?

ನಿಮಗೆ ಮೊದಲು ಯಾರಾದ್ರೂ ಗರ್ಲ್ ಫ್ರೆಂಡ್ ಇದ್ದರಾ? ಈಗಲೂ ಇದ್ದಾರಾ? ನಿಮ್ಮ ಹಾಗೂ ಆಕೆಯ ಸ್ನೇಹ ಯಾವ ಹಂತದಲ್ಲಿತ್ತು?

ಡ್ರೆಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮದುವೆ ನಂತ್ರ ವೆಸ್ಟರ್ನ್ ಡ್ರೆಸ್ ಹಾಕಲು ನನಗೆ ಅನುಮತಿ ಕೊಡುತ್ತೀರಾ?

ನನ್ನ ಕೆಲಸದ ಬಗ್ಗೆ ನಿಮ್ಮ ಯೋಚನೆ ಏನಿದೆ? ನಾನು ಕೆಲಸ ಬಿಡಲು ಇಷ್ಟಪಡುವುದಿಲ್ಲ.

ನೀವು ದೇವರನ್ನು ನಂಬುತ್ತೀರಾ? ಇಲ್ಲವಾ?

ನಿಮ್ಮಿಷ್ಟದಂತೆ ಮದುವೆಯಾಗುತ್ತಿದ್ದೀರಾ ಅಥವಾ ಬೇರೆಯವರ ಒತ್ತಡಕ್ಕಾ?

ಇಷ್ಟು ಚೆನ್ನಾಗಿದ್ದರೂ ಯಾಕೆ ಇಷ್ಟು ದಿನ ಮದುವೆಯಾಗಿಲ್ಲ?

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...