alex Certify
ಕನ್ನಡ ದುನಿಯಾ       Mobile App
       

Kannada Duniya

ಟೆರೆಸ್ ಮೇಲೆ ಅಕ್ಕಿ ಬೆಳೆಯುತ್ತಾರೆ ಈ ಆಧುನಿಕ ಕೃಷಿಕ

ಸಾವಯವ ಕೃಷಿ ಈಗ ನಗರ ಪ್ರದೇಶದಲ್ಲಿ ಹೊಸ ಟ್ರೆಂಡ್ ಆಗ್ಬಿಟ್ಟಿದೆ. ಪುಟ್ಟದೊಂದು ಕಿಚನ್ ಗಾರ್ಡನ್ ಆದ್ರೂ ಇದ್ರೆ ಮನಸ್ಸಿಗೆ ಒಂದು ರೀತಿಯ ಖುಷಿ. ಆದ್ರೆ ಮನೆಯ ಟೆರೆಸ್ ಮೇಲೆ ದವಸ-ಧಾನ್ಯ ಬೆಳೆದಿರೋದನ್ನು ನೀವು ಎಲ್ಲೂ ನೋಡಿರಲಿಕ್ಕಿಲ್ಲ. ಅದಕ್ಕೆ ಬಹಳ ನೀರು ಬೇಕು ಅನ್ನೋ ಭಾವನೆ ಎಲ್ಲರಲ್ಲೂ ಇದೆ.

ಆದ್ರೆ ಮಂಗಳೂರಿನ ಪದ್ದಂಬೈಲ್ ನಿವಾಸಿ ಕೃಷ್ಣಪ್ಪ ಗೌಡ ಹೊಸ ಸಾಹಸ ಮಾಡಿದ್ದಾರೆ. ಕಳೆದ 5 ವರ್ಷಗಳಿಂದ 1200 ಚದರ ಅಡಿ ವಿಸ್ತಾರವಾಗಿರೋ ತಮ್ಮ ಮನೆಯ ಟೆರೆಸ್ ಮೇಲೆ ಕೃಷಿ ಮಾಡ್ತಿದ್ದಾರೆ. ಸುಮಾರು 200 ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಭತ್ತ ಬೆಳೆಯುತ್ತಿದ್ದಾರೆ.

ಬ್ಯಾಗ್ ಗಳಲ್ಲಿ ಮಣ್ಣು, ಸಗಣಿ ಮತ್ತು ಮರಳನ್ನು ಮಿಶ್ರಣ ಮಾಡಿ ಅದರಲ್ಲಿ ಭತ್ತ ನಾಟಿ ಮಾಡುತ್ತಾರೆ. ಎಪ್ರಿಲ್ – ಮೇ ತಿಂಗಳಿನಲ್ಲಿ ಹುಲುಸಾದ ಭತ್ತದ ಫಸಲು ಬರುತ್ತದೆ. ಅದರ ಜೊತೆಜೊತೆಗೆ ಮೂಲಂಗಿ, ಹಣ್ಣು, ಅರಿಶಿನ, ಇತರ ತರಕಾರಿಗಳನ್ನೂ ಕೃಷ್ಣಪ್ಪ ಬೆಳೆಯುತ್ತಿದ್ದಾರೆ.

ಕೃಷ್ಣಪ್ಪ ಮತ್ತವರ ಪತ್ನಿ ಮಾರ್ಕೆಟ್ ನಿಂದ ತರಕಾರಿ ಖರೀದಿಸೋದನ್ನೇ ಬಿಟ್ಟುಬಿಟ್ಟಿದ್ದಾರೆ. ಅಷ್ಟೇ ಅಲ್ಲ ತಾವು ಬೆಳೆದ ಭತ್ತ, ಹಣ್ಣು, ತರಕಾರಿಗಳನ್ನು ಎಂದೂ ಮಾರಾಟ ಮಾಡಿಲ್ಲ. ಈ ಪರಿಸರ ಸ್ನೇಹಿ ಕೃಷಿ ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...