alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿಗೆ ಪ್ರಪೋಸ್ ಮಾಡಿದಾತ ಆಕೆಯ ಮಗಳಿಗೆ ಹೇಳಿದ್ದೇನು?

p2

ಅಮೆರಿಕದ ಇಂಡಿಯಾನಾ ನಿವಾಸಿ ಗ್ರಾಂಟ್ ಟ್ರಿಬೆಟ್ ಕಳೆದ ಒಂದು ವರ್ಷದಿಂದ ಕಸ್ಸಂದ್ರ ರೆಚಾರ್ ಎಂಬಾಕೆಯನ್ನು ಪ್ರೀತಿಸ್ತಾ ಇದ್ದ. ಆಕೆಗೆ 5 ವರ್ಷದ ಮಗಳಿದ್ದಾಳೆ. ಗ್ರಾಂಟ್ ಹಾಗೂ ಕಸ್ಸಂದ್ರ ಡೇಟಿಂಗ್ ನಡೆಸ್ತಾ ಇದ್ರು. ಇಬ್ಬರೂ ಮದುವೆಯಾಗಲು ಇದು ಸೂಕ್ತ ಸಮಯ ಅಂತಾ ಗ್ರಾಂಟ್ ಗೆ ಅನಿಸಿತ್ತು.

p

ಹಾಗಾಗಿ ಪ್ರಿಯತಮೆಗೆ ಪ್ರಪೋಸ್ ಮಾಡಲೆಂದೇ ಕಸ್ಸಂದ್ರ ಹಾಗೂ ಅವಳ ಮಗಳು ಇಬ್ಬರನ್ನೂ ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ಕರೆದುಕೊಂಡು ಹೋಗಿದ್ದ. ತಿಂಡಿ ಮುಗಿಸಿ ಮೂವರೂ ಸುತ್ತಾಡಲು ಹೊರಟಿದ್ರು. ವಿಶಾಲವಾದ ಪ್ರದೇಶಕ್ಕೆ ಬರ್ತಿದ್ದಂತೆ ಗ್ರಾಂಟ್, ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ.

p1

ತನ್ನನ್ನು ಮದುವೆಯಾಗು ಅಂತಾ ಕೇಳಿದ್ದಾನೆ. ಅಷ್ಟೇ ಅಲ್ಲ ಆಕೆಯ 5 ವರ್ಷದ ಮಗಳು ಅಡ್ರಿಯಾನಾಗೂ ಪ್ರಪೋಸ್ ಮಾಡಿದ್ದು ವಿಶೇಷ. ಅಡ್ರಿಯಾನಾ ನಾನು ನಿನಗೆ ತಂದೆ ಆಗಬಹುದಾ? ಜೀವನದುದ್ದಕ್ಕೂ ನಿನಗೆ ತಂದೆಯ ಪ್ರೀತಿ ಕೊಟ್ಟು ರಕ್ಷಿಸ್ತೇನೆ ಅಂತಾ ಪ್ರಾಮಿಸ್ ಮಾಡಿದ್ದಾನೆ.

p3

ಗ್ರಾಂಟ್ ಪ್ರಪೋಸ್ ಮಾಡಿದ ರೀತಿ ನೋಡಿ ಆತನ ಗೆಳತಿಯ ಕಣ್ಣಲ್ಲಿ ನೀರಾಡಿತ್ತು. ಪುಟಾಣಿ ಅಡ್ರಿಯಾನಾ ಕೂಡ ಅಪ್ಪ ಸಿಕ್ಕಿದ ಖುಷಿಯಲ್ಲಿ ಕುಣಿದಾಡಿದ್ದಾಳೆ. ಈ ವಿಶಿಷ್ಟ ಲವ್ ಸ್ಟೋರಿ ಫೇಸ್ಬುಕ್ ನಲ್ಲೂ ಸುದ್ದಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...