alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವಿನ ವಿಷ ಕುಡಿದರೂ ಬದುಕಿದ್ದಾನೆ ಈತ…!!!

ಇಲ್ಲೊಬ್ಬ ವಿಚಿತ್ರ ಮನುಷ್ಯನಿದ್ದಾನೆ. ಹಾವಿನ ವಿಷ ಹೀರದಿದ್ರೆ ಇವನಿಗೆ ನೆಮ್ಮದಿ ಇಲ್ಲ. 30 ವರ್ಷದಿಂದ ಹಾವಿನ ವಿಷ ಕುಡಿದು ಜೀವನ ಸಾಗಿಸ್ತಿದ್ದಾನೆ. ಕಾಫಿ-ಟೀ ಜೊತೆ ಇವನಿಗೆ ಬೇಕೇ ಬೇಕು ಘಟಸರ್ಪಗಳ ವಿಷ. ಹಾವಿನ ವಿಷ ದೇಹ ಸೇರಿದ್ರೂ ಬದುಕಿದ್ದೇಗೆ ಇಷ್ಟು ವರ್ಷ..? ಮುಂದೆ ಓದಿ….

ಎಲ್ಲರಿಗಿಂತ ವಿಭಿನ್ನ ವ್ಯಕ್ತಿಯೊಬ್ಬನನ್ನು ನಾವು ನಿಮಗಿಂದು ಪರಿಚಯ ಮಾಡಿಕೊಡಲಿದ್ದೇವೆ. ಈತನಿಗೆ ಹಾವು ಅಂದ್ರೆ ಭಯವಿಲ್ಲ. ಹಾವಿನ ವಿಷ ಅಂದ್ರೂ ಭಯವಿಲ್ಲ. ಸದಾ ಹಾವಿಗಾಗಿ ಹುಡುಕಾಡೋ ಈತ ಭೂಮಿ ಮೇಲಿನ ವಿಚಿತ್ರ ಮಾನವ ಅಂದ್ರೂ ತಪ್ಪಾಗಲ್ಲ. ಆದರೆ, ಈ ವ್ಯಕ್ತಿ ಹಾವಿನ ಮಾಂಸ ತಿನ್ನಲ್ಲ. ಬದಲಾಗಿ ಈತನಿಗೆ ಬೇಕಾಗಿರೋದು ಹಾವಿನಲ್ಲಿರೋ ವಿಷ ಮಾತ್ರ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ತಲಾರಿ ಚಿರಂಜೀವಿಯೇ ಈ ವಿಚಿತ್ರ ಮನುಷ್ಯ.

ಹಾವಿನ ಹಲ್ಲುಗಳಲ್ಲಿರೋ ವಿಷ ಅಂದ್ರೆ ಈತನಿಗೆ ಪಂಚಪ್ರಾಣ. ಕನಸಿನಲ್ಲಿ ಹಾವು ಕಂಡ್ರೆ ಸಾಕು ತಾಯಿತ ಕಟ್ಟಿಕೊಳ್ಳೋ ಮನುಷ್ಯರ ನಡುವೆ ಈತ ಮಾತ್ರ ಡಿಫರೆಂಟ್ ಆಗಿ ಕಾಣ್ತಾನೆ. ಹಾವಿದೆ ಅನ್ನೋ ಒಂದು ಫೋನ್ ಕಾಲ್ ಬಂದರೆ ಸಾಕು ಮರುಕ್ಷಣವೇ ಹಾವಿರುವ ಜಾಗಕ್ಕೆ ಹೋಗುವ ಈತ ಅಲ್ಲಿರೋ ಹಾವನ್ನ ಹಿಡಿದು ಕೊರಳಿಗೆ ಧರಿಸಿ, ಒಂಚೂರು ಭಯವಿಲ್ಲದೆ ಫೋಸ್ ಕೊಡುತ್ತಾನೆ. ಅಷ್ಟೇ ಅಲ್ಲ….ಹೀಗೆ ಸಿಕ್ಕ ಹಾವಿನ ವಿಷವನ್ನ ಕಾಫಿ, ಟೀಯಲ್ಲಿ ಬೆರೆಸಿಕೊಂಡು ಕುಡಿಯುತ್ತಾನೆ. ಕೆಲವೊಮ್ಮೆ ಹಾಗೆಯೇ ಹಾವಿನ ವಿಷವನ್ನ ಚಪ್ಪರಿಸಿಕೊಂಡು ಸವಿಯುತ್ತಾನೆ.

ಚಿಕ್ಕಂದಿನಿಂದಲೇ ಹಾವಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಈತ ಹಾವಿನೊಂದಿಗೆ ಆಟವಾಡುತ್ತಾ ಬೆಳೆದಿದ್ದ. ಹಾವಿನ ವಿಷ ದೇಹ ಸೇರಿದ್ರೆ ಸಾಯುತ್ತಾರೆ ಅಂತ ತಂದೆ ಗದರಿಸಿದ್ದಕ್ಕೆ, ಹಾವಿನ ವಿಷ ಕುಡಿದೇ ಬಿಡುವ ಅನ್ನೋ ಹಟಕ್ಕೆ ಬಿದ್ದ. ಈ ತಲಾರಿ ಕಾಫಿ, ಟೀಯಲ್ಲಿ ವಿಷ ಬೆರೆಸಿ ಕುಡಿಯಲಾರಂಭಿಸಿದ. ಆದರೆ, ಯಾವುದೇ ಅಪಾಯ ಸಂಭವಿಸಲಿಲ್ಲ. ಇದನ್ನೇ ಅಭ್ಯಾಸ ಮಾಡಿಕೊಂಡು ಬಂದ ಇವನೀಗ ಸತತ 30 ವರ್ಷಗಳಿಂದ ಹಾವಿನ ವಿಷ ಕುಡಿಯುತ್ತಾ ಬಂದಿದ್ದಾನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...