alex Certify
ಕನ್ನಡ ದುನಿಯಾ       Mobile App
       

Kannada Duniya

ಆಗಸ್ಟ್ 7 ರಂದು ಚಂದ್ರಗ್ರಹಣ

grahan-chnd

ನವದೆಹಲಿ: ಆಗಸ್ಟ್ 7 ರಂದು ರಾತ್ರಿ ಚಂದ್ರಗ್ರಹಣವಾಗಲಿದೆ ಎಂದು ನೆಹರೂ ತಾರಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಗಸ್ಟ್ 7 ರಂದು ರಾತ್ರಿಯಿಂದ ಮರುದಿನ ಬೆಳಗಿನ ಜಾವದವರೆಗೆ ಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಮಾತ್ರವಲ್ಲದೇ, ಯುರೋಪ್, ಏಷ್ಯಾ, ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಕಾಣಿಸಲಿದೆ ಎಂದು ಹೇಳಿದ್ದಾರೆ.

ಆಗಸ್ಟ್ 7 ರಂದು ರಾತ್ರಿ 9.20 ಕ್ಕೆ ಗ್ರಹಣ ಆರಂಭವಾಗಿ ರಾತ್ರಿ 10.52 ರ ನಂತರ ಬರಿಗಣ್ಣಿಗೆ ಕಾಣುತ್ತದೆ. ರಾತ್ರಿ 12.48 ರ ವರೆಗೂ ಗ್ರಹಣ ವೀಕ್ಷಿಸಬಹುದಾಗಿದೆ.

ಸೂರ್ಯ, ಭೂಮಿ ಮತ್ತು ಚಂದ್ರ ಬಹುತೇಕ ನೇರ ರೇಖೆಯಲ್ಲಿ ಒಟ್ಟುಗೂಡಿದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸನ್ನಿವೇಶದಲ್ಲಿ ಚಂದ್ರನ ಮೇಲೆ ನೆರಳು ಆವರಿಸುತ್ತದೆ.

ದೆಹಲಿಯ ನೆಹರೂ ತಾರಾಲಯದಲ್ಲಿ ಟೆಲಿಸ್ಕೋಪ್ ಗಳ ಮೂಲಕವೂ ಗ್ರಹಣಕ್ಕೆ ಮೊದಲಿನ, ಗ್ರಹಣದ ಹಾಗೂ ನಂತರದ ದೃಶ್ಯಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...