alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಸುವವರ ನಡುವಿನ ಪಿಸು ಮಾತುಗಳು….

Les amoureux de Marine Drive… Gli innamorati di Marine Drive

ಹುಡುಗ ಅಥವಾ ಹುಡುಗಿ ತಾವು ಇಷ್ಟಪಟ್ಟವರ ಬಗ್ಗೆ ಆರಂಭದಲ್ಲಿ ಸ್ನೇಹಿತರು, ಆತ್ಮೀಯರ ಬಳಿ ವಿಷಯ ಹಂಚಿಕೊಳ್ಳುತ್ತಾರೆ. ಪ್ರೀತಿ ಗಾಢವಾದಂತೆ ಇಬ್ಬರೇ ಇರಲು ಇಷ್ಟಪಡುತ್ತಾರೆ. ಬೇರೆಯವರ ಬಳಿ ತಮ್ಮ ಪ್ರೀತಿಯ ವಿಷಯದ ಬಗ್ಗೆ ಹೆಚ್ಚಿಗೆ ಹೇಳಿಕೊಳ್ಳಲಾರರು.

ಆರಂಭದಲ್ಲಿಯೇ ಗೆಳೆಯ, ಗೆಳತಿಯರ ಗುಂಪಿನಲ್ಲಿ ಪ್ರೀತಿ ಬಗ್ಗೆ ಹೇಳಿಕೊಳ್ಳುತ್ತಿದ್ದವರು ನಂತರದಲ್ಲಿ ಆ ವಿಷಯದ ಬಗ್ಗೆ ಏನೂ ಹೇಳುವುದಿಲ್ಲ. ಆಗಲೇ ನೋಡಿ ಶುರುವಾಗೋದು ನೀತಿ ಪಾಠ. ಹಿರಿಯ ಸ್ನೇಹಿತರಾದರೇ ತಲೆ ತಗ್ಗಿಸಿಕೊಂಡು ಬುದ್ಧಿ ಮಾತನ್ನು ಅನಿವಾರ್ಯವಾಗಿ ಕೇಳಬೇಕು. ಸಮ ವಯಸ್ಕರಾದರೆ ಅವನಿಂದ ಅಥವಾ ಆಕೆಯಿಂದ ಹುಷಾರಾಗಿರು ಎಂಬ ಹಿತವಚನಗಳನ್ನು ಕೇಳಬೇಕಾಗುತ್ತದೆ. ತಾನು ಪ್ರೀತಿಸಿದ ಹುಡುಗಿ ಅಥವಾ ಹುಡುಗ ಬೇರೆ ಹುಡುಗರು, ಹುಡುಗಿಯರೊಂದಿಗೆ ಮಾತನಾಡುವುದನ್ನು ಸಾಮಾನ್ಯವಾಗಿ ಯಾರೂ ಸಹಿಸಿಕೊಳ್ಳುವುದಿಲ್ಲ.

ಗೆಳೆಯರೊಂದಿಗೆ ಜಾಸ್ತಿ ಸುತ್ತಾಡಬೇಡ, ರಾತ್ರಿಯಂತೂ ಕಾಲ ಕಳೆಯಲೇ ಬೇಡ, ಸಿಗರೇಟ್ ಸೇದಬೇಡ, ಡ್ರಿಂಕ್ಸ್ ಮಾಡಬೇಡ, ಆಗಾಗ ಫೋನ್ ಮಾಡುತ್ತಿರು ಎಂಬ ಸಲಹೆ ಹುಡುಗಿಯರಿಂದ ಹುಡುಗರಿಗೆ ಮಾಮೂಲಿಯಾಗಿರುತ್ತದೆ. ಹುಡುಗರೂ ಅಷ್ಟೇ ಇಂತಹುದೇ ಅನೇಕ ಕಂಡೀಷನ್ ಹಾಕುತ್ತಾರೆ. ಇನ್ನು ಮನೆಯಲ್ಲಿ ವಿಷಯ ಗೊತ್ತಾದರಂತೂ ಮುಗಿದೇ ಹೋಯ್ತು, ತಂದೆ- ತಾಯಿಗಳು ಮಾತ್ರವಲ್ಲ, ಇದ್ದಬದ್ಧವರೆಲ್ಲರ ಬುದ್ಧಿಮಾತು ಕೇಳಲು ರೆಡಿಯಾಗಿರಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...