alex Certify
ಕನ್ನಡ ದುನಿಯಾ       Mobile App
       

Kannada Duniya

ದುರಂತ ಅಂತ್ಯವಾಯ್ತು ತೆಲಂಗಾಣ ಲವ್ ಸ್ಟೋರಿ

telang-lov

ಹೈದರಾಬಾದ್: ಅವರಿಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರ ನಡುವೆ ಗೆಳೆತನವಾಗಿ ಅದು ಪ್ರೀತಿಗೆ ತಿರುಗಿತ್ತು. ಇಬ್ಬರೂ ಹೊಸ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದರೂ, ಜಾತಿ ಅದಕ್ಕೆ ಅಡ್ಡಿಯಾಗಿದೆ. ಅವರ ಬದುಕೇ ಇಲ್ಲವಾಗಿದೆ.

ಮೇಲ್ಜಾತಿಗೆ ಸೇರಿದ್ದ ಸ್ವಾತಿ, ಹಿಂದುಳಿದ ವರ್ಗದ ಯುವಕ ನರೇಶ್ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಮನೆ ಬಿಟ್ಟು ಮುಂಬೈ ಸೇರಿದ್ದಾರೆ. ಅಲ್ಲೇ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾರೆ.

ಆದರೆ, ಇವರ ಮದುವೆಗೆ ಮೊದಲೇ ವಿರೋಧಿಸಿದ್ದ ಸ್ವಾತಿಯ ತಂದೆ ಶ್ರೀನಿವಾಸ ರೆಡ್ಡಿ ಪ್ಲಾನ್ ಮಾಡಿ ದಂಪತಿಯನ್ನು ಊರಿಗೆ ಕರೆಸಿಕೊಂಡಿದ್ದಾರೆ.

ಭೋಂಗಿರ್ ಗೆ ಸ್ವಾತಿ ಹಾಗೂ ನರೇಶ್ ಬಂದಿದ್ದು, ಅಂದಿನಿಂದಲೂ ನರೇಶ್ ನಾಪತ್ತೆಯಾಗಿದ್ದಾನೆ. ನರೇಶನ ತಂದೆ ತಮ್ಮ ಪುತ್ರನನ್ನು ಹುಡುಕಿಕೊಡಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ.

ಕೋರ್ಟ್ ಸ್ವಾತಿಯನ್ನು ಕರೆತರಲು ಸೂಚಿಸಿದರೆ, ಆಕೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಆಕೆಯ ಮನೆಯವರು ಹೇಳಿದ್ದಾರೆ.

ನಂತರದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಸ್ವಾತಿ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ.

ನರೇಶನ ತಂದೆ, ಸ್ವಾತಿಯ ಸಾವಿನ ತನಿಖೆ ನಡೆಸಬೇಕು ಮತ್ತು ಪುತ್ರನನ್ನು ಹುಡುಕಿಕೊಡಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದಾರೆ.

ನರೇಶ ಸ್ವಾತಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಸ್ವಾತಿಯ ಕುಟುಂಬದವರು ಆರೋಪಿಸಿದ್ದಾರೆ. ಇದೆಲ್ಲದರ ನಡುವೆ ಹೊಸ ಜೀವನ ಆರಂಭಿಸುವ ಕನಸು ಕಂಡಿದ್ದ ಸ್ವಾತಿ ಮತ್ತು ನರೇಶ್ ಲವ್ ಸ್ಟೋರಿ ದುರಂತ ಅಂತ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...