alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಬಂಧ ಗಟ್ಟಿಗೊಳಿಸಲು ಸೆಕ್ಸ್ ಬೇಕು….ಆದ್ರೆ ಎಷ್ಟು ಬಾರಿ?

sex-study-

ದಾಂಪತ್ಯದಲ್ಲಿ ಸೆಕ್ಸ್ ಲೈಫ್ ತುಂಬಾ ಅಗತ್ಯ. ಇದು ಮನಸ್ಸನ್ನು ಖುಷಿಗೊಳಿಸುವ ಜೊತೆಗೆ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಒತ್ತಡ ಕಡಿಮೆ ಮಾಡಿ ಉತ್ತಮ ನಿದ್ದೆ ಬರುವಂತೆ ಮಾಡುತ್ತದೆ.

ಇದಲ್ಲದೆ ಶಾರೀರಿಕ ಸಂಬಂಧ ಹೊಂದುವುದರಿಂದ ನಿಮ್ಮ ಸಂಬಂಧ ಕೂಡ ಉತ್ತಮವಾಗಿರುತ್ತದೆ. ಇದು ಅನೇಕರಿಗೆ ಗೊತ್ತಿರುವ ವಿಚಾರ. ಹಾಗಂತ ಹೆಚ್ಚು ಬಾರಿ ಶಾರೀರಿಕ ಸಂಬಂಧ ಹೊಂದುವುದರಿಂದ ಸಂತೋಷ ಹೆಚ್ಚಾಗುತ್ತಾ..?

ಸಂಶೋಧನೆಯೊಂದು ಇಲ್ಲ ಎನ್ನುವ ವರದಿಯನ್ನು ಮುಂದಿಡುತ್ತಿದೆ. ಸೆಕ್ಸ್ ಮನುಷ್ಯನಿಗೆ ಅಗತ್ಯ ನಿಜ. ಹಾಗಂತ ಅತಿಯಾದ್ರೆ ಕಷ್ಟ ಎನ್ನುತ್ತದೆ ಸಂಶೋಧನೆ. ದಂಪತಿಗೆ 30 ದಿನ ಶಾರೀರಿಕ ಸಂಬಂಧ ಬೆಳೆಸುವಂತೆ ಹೇಳಲಾಯ್ತು. ಮೊದ ಮೊದಲಿದ್ದ ಉತ್ಸಾಹ ದಂಪತಿಯಲ್ಲಿ ನಂತ್ರ ಕಾಣಲಿಲ್ಲ.

ಪ್ರತಿ ದಿನಕ್ಕಿಂತ ವಾರದಲ್ಲಿ ಒಂದು ದಿನ ಶಾರೀರಿಕ ಸಂಬಂಧ ಬೆಳೆಸುವುದು ಬೆಸ್ಟ್ ಎನ್ನುತ್ತದೆ ಸಂಶೋಧನೆ. ಶಾರೀರಿಕ ಸಂಬಂಧ ಬೆಳೆಸದೇ ಇರುವುದಕ್ಕಿಂತ ಬೆಳೆಸಿದ್ರೆ ಹೆಚ್ಚು ಲಾಭ. ಹಾಗಂತ ಪ್ರತಿ ದಿನ ಸಂಬಂಧ ಹೊಂದುವುದಕ್ಕಿಂತ ವಾರದಲ್ಲಿ ಒಮ್ಮೆ ಸಂಬಂಧ ಹೊಂದುವ ದಂಪತಿ ಹೆಚ್ಚು ಖುಷಿಯಾಗಿರುತ್ತಾರಂತೆ.

ಒತ್ತಡದ ಲೈಫ್ ನಲ್ಲಿ ಕೆಲ ದಂಪತಿ ಶಾರೀರಿಕ ಸಂಬಂಧದಿಂದ ದೂರ ಉಳಿಯುತ್ತಾರೆ. ಇದೂ ಒಳ್ಳೆಯದಲ್ಲ ಎನ್ನುತ್ತದೆ ಸಂಶೋಧನೆ. ಸೆಕ್ಸ್ ವಿಚಾರದಲ್ಲಿ ದಂಪತಿ ಅಭಿಪ್ರಾಯ ಭಿನ್ನವಾಗಿರುತ್ತದೆ. ಅವರದೇ ಆದ ನೀತಿಗಳನ್ನು ಅನುಸರಿಸುತ್ತಿರುತ್ತಾರೆ. ಆದ್ರೆ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಾ ಬಂದಲ್ಲಿ ಜೀವನದ ಉತ್ಸಾಹ ಮತ್ತಷ್ಟು ಹೆಚ್ಚಿ, ಸುಖ ದಾಂಪತ್ಯ ನಿಮ್ಮದಾಗುತ್ತದೆ ಎನ್ನುತ್ತದೆ ಸಂಶೋಧನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...