alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿಯೊಂದಿಗಿನ ‘ಸ್ನೇಹ’ ಪ್ರೀತಿಗೆ ಚಿಗುರೊಡೆದಾಗ….

frined-love_b_04

ಸ್ನೇಹಕ್ಕೆ ಸರಿಸಾಟಿಯಿಲ್ಲ. ಪ್ರೀತಿ, ಮುನಿಸು, ಮೋಜು, ಮಸ್ತಿ ಎಲ್ಲದರ ಸಮ್ಮಿಲನ ದೋಸ್ತಿ. ಗೊತ್ತಿಲ್ಲದಂತೆ ಎರಡು ಹೃದಯಗಳ ನಡುವೆ ಸ್ನೇಹ ಚಿಗುರಿಬಿಡುತ್ತದೆ. ಆದ್ರೆ ಈ ಸ್ನೇಹ ಅನೇಕ ಬಾರಿ ಗಡಿ ದಾಟಿ ಬಿಡುತ್ತದೆ. ಸ್ನೇಹದ ಜೊತೆಗೆ ಪ್ರೀತಿ ಚಿಗುರತೊಡಗುತ್ತದೆ. ನಿಮ್ಮಲ್ಲೂ ಇಂತ ಲಕ್ಷಣಗಳು ಕಂಡು ಬಂದ್ರೆ ಸ್ನೇಹ ಪ್ರೀತಿಯತ್ತ ವಾಲ್ತಿದೆ ಎಂಬುದು ನಿಶ್ಚಿತ.

ಸ್ನೇಹದಲ್ಲಿ ಮಾತು ಮಾಮೂಲಿ. ಪ್ರತಿದಿನ ನಡೆಯುವ ಸಣ್ಣಪುಟ್ಟ ವಿಚಾರಗಳನ್ನು ಸ್ನೇಹಿತರ ಮುಂದೆ ಹೇಳದೆ ಹೋದ್ರೆ ಮನಸ್ಸು ರಿಫ್ರೆಶ್ ಆಗೋದಿಲ್ಲ. ದಿನದಲ್ಲಿ ಒಮ್ಮೆಯಾದ್ರೂ ಮಾತುಕತೆಯಾಗ್ಲೇ ಬೇಕು. ದಿನದ ಬದಲು ಮಾತು ಗಂಟೆಗೆ ತಿರುಗಿದ್ರೆ ಹೃದಯದಲ್ಲಿ ಕುಚ್ ಕುಚ್ ಶುರುವಾಗಿದೆ ಎಂದೇ ಅರ್ಥ.

ಸ್ನೇಹಿತರ ಗುಂಪಿನಲ್ಲಿ ಹುಡುಗ- ಹುಡುಗಿ ಇಬ್ಬರೂ ಇದ್ದರೆ ಎಲ್ಲ ವಿಚಾರಗಳನ್ನು ಎಲ್ಲರೂ ಹಂಚಿಕೊಳ್ತಾರೆ. ಆದ್ರೆ ಗುಂಪಿನಲ್ಲಿರುವ ಹುಡುಗ ಒಂದು ಹುಡುಗಿ ಬಳಿ ಮಾತ್ರ ಗುಟ್ಟು ಹೇಳ್ತಿದ್ದಾನೆಂದ್ರೆ ಅದ್ರಲ್ಲೇನೋ ವಿಶೇಷವಿದೆ ಎಂಬುದು ಗ್ಯಾರಂಟಿ.

ಬ್ಯುಸಿ ಲೈಫ್ ನಲ್ಲಿ ನಿಮಗೊಬ್ಬರಿಗಾಗೇ ಸಮಯ ತೆಗೆದಿಡಲು ಶುರು ಮಾಡಿದ್ದಾರೆಂದ್ರೆ ಆ ಸ್ನೇಹ ಸ್ನೇಹವಾಗಿ ಉಳಿಯುತ್ತಿಲ್ಲ ಎಂದೇ ಅರ್ಥ

ಒಂದು ಹುಡುಗ, ಹುಡುಗಿ ಜಿಗರಿ ದೋಸ್ತಿಗಳಾದ್ರೆ ಅವರಿಬ್ಬರ ನಡುವೆ ಪ್ರೀತಿ ಚಿಗುರುವ ಸಾಧ್ಯತೆ ಹೆಚ್ಚಿರುತ್ತದೆ. ಸ್ನೇಹಿತನಿಗೆ ಯಾವುದು ಇಷ್ಟ, ಯಾವುದು ಕಷ್ಟ ಎಂಬುದನ್ನು ಅರಿಯುತ್ತ ಇಬ್ಬರ ಹೃದಯ ಹತ್ತಿರವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...