alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರೀನ್ ಲ್ಯಾಂಡ್ ನಲ್ಲಿವೆ 400 ವರ್ಷ ವಯಸ್ಸಿನ ಶಾರ್ಕ್ ಗಳು

SHARKವಿಶ್ವದಲ್ಲಿ ದೀರ್ಘಾಯುಷಿ ಶಾರ್ಕ್ ಮೀನುಗಳಿರೋದು ಗ್ರೀನ್ ಲ್ಯಾಂಡ್ ನಲ್ಲಿ. ಅಲ್ಲಿ 400 ವರ್ಷ ವಯಸ್ಸಿನ ಶಾರ್ಕ್ ಗಳು ಜೀವಿಸುತ್ತಿವೆ ಅನ್ನೋದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಒಟ್ಟು 28 ಮೀನುಗಳ ಪರೀಕ್ಷೆ ನಡೆಸಲಾಗಿದ್ದು, ಇವುಗಳಲ್ಲಿ ಒಂದು ಹೆಣ್ಣು ಶಾರ್ಕ್ ಗೆ 400 ವರ್ಷವಾಗಿದೆ ಅಂತಾ ತಿಳಿಸಿದ್ದಾರೆ. ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಅವು ವರ್ಷಕ್ಕೆ ಕೇವಲ ಒಂದು ಸೆಂ.ಮೀ. ಬೆಳೆಯುತ್ತವಂತೆ.

ಅವು ಲೈಂಗಿಕ ಪರಿಪಕ್ವತೆ ಹೊಂದುವುದು ಕೂಡ 150 ವರ್ಷಗಳಿಗೆ ಎನ್ನಲಾಗಿದೆ. ಇದಕ್ಕೂ ಮುನ್ನ ದೀರ್ಘಾಯುಷಿ ಎಂದು ಪರಿಗಣಿಸಲಾಗಿದ್ದ ಶಾರ್ಕ್ 211 ವರ್ಷ ಬದುಕಿತ್ತು. ಗ್ರೀನ್ ಲ್ಯಾಂಡ್ ನ ಶಾರ್ಕ್ ಗಳು 5 ಮೀಟರ್ ಉದ್ದ ಬೆಳೆಯುತ್ತವೆ. ಇತರ ಶಾರ್ಕ್ ಗಳಂತೆ ಇವುಗಳ ದೇಹ ಗಟ್ಟಿಯಾಗಿರದೆ ಅತ್ಯಂತ ಮೃದುವಾಗಿರುತ್ತದೆ. ಅಟ್ಲಾಂಟಿಕ್ ಸಾಗರದ ತಣ್ಣನೆಯ ನೀರಿನಲ್ಲಿ ಅವು ನಿಧಾನವಾಗಿ ಈಜುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...