alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಜನತೆ ಮೊದಲ ಆದ್ಯತೆ ಲಿವ್ ಇನ್ ರಿಲೇಶನ್ ಶಿಪ್

livein

ಇತ್ತೀಚೆಗೆ ಲಿವ್ ಇನ್ ರಿಲೇಶನ್ ಶಿಪ್ ಸಂಸ್ಕೃತಿ ಜಾಸ್ತಿಯಾಗ್ತಿದೆ. ಯುವಜನತೆ ಇದಕ್ಕೆ ಆಕರ್ಷಿತರಾಗ್ತಿದ್ದಾರೆ. ಇದರಲ್ಲಿ ಸಾಕಷ್ಟು ಪ್ರಯೋಜನಗಳಿವೆ ಎನ್ನುವ ಕಾರಣಕ್ಕೆ ಯುವಜನತೆ ಲಿವ್ ಇನ್ ರಿಲೇಶನ್ ಶಿಪ್ ಗೆ ಮೊದಲ ಆದ್ಯತೆ ನೀಡ್ತಿದ್ದಾರೆ.

ಯಾವುದೇ ಕಮಿಟ್ಮೆಂಟ್ ಇರುವುದಿಲ್ಲ. ಮದುವೆಯಾದ್ರೆ ಒಂದು ಜವಾಬ್ದಾರಿ ಹೆಗಲಿಗೇರಿದಂತೆ. ಆದ್ರೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಅದು ಇರುವುದಿಲ್ಲ. ಹಾಗಾಗಿ ಯುವಕರು ಜವಾಬ್ದಾರಿ ಇಲ್ಲದ ಸಂಬಂಧವನ್ನು ಇಷ್ಟಪಡ್ತಾರೆ.

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಯಾವಾಗ ಬೇಕಾದ್ರೂ ಸಂಬಂಧ ಮುರಿದುಕೊಂಡು ಹೋಗಬಹುದು. ಏಕೆ ದೂರವಾಗ್ತಿದ್ದೇವೆ ಎನ್ನುವ ಬಗ್ಗೆ ಕಾರಣ ಹೇಳಬೇಕಾಗಿಲ್ಲ. ಕೋರ್ಟ್ ಕಚೇರಿ ಅಲೆಯಬೇಕಾಗಿಲ್ಲ.

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ನೀವು ಬೇರೆಯವರ ಜೊತೆ ಕೂಡ ಶಾರೀರಿಕ ಸಂಬಂಧ ಬೆಳೆಸಬಹುದು. ಈ ಬಗ್ಗೆ ಪ್ರಶ್ನಿಸುವ ಅಧಿಕಾರ ಯಾರಿಗೂ ಇರುವುದಿಲ್ಲ.

ಆರ್ಥಿಕ ವಿಚಾರದಲ್ಲಿಯೂ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ನೀವು ಯಾಕೆ ಹಣ ಖರ್ಚು ಮಾಡಿದ್ದೀರಿ ಎಂಬ ಕಾರಣವನ್ನು ಯಾರಿಗೂ ಹೇಳಬೇಕಾಗಿರುವುದಿಲ್ಲ.

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವವರಿಗೆ ಅವರ ಜೋಡಿಯನ್ನು ಸಂತೈಸುವ, ಆರೈಕೆ ಮಾಡುವ, ನೋವಾಗದಂತೆ ನೋಡಿಕೊಳ್ಳಬೇಕೆಂಬುದಿರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...