alex Certify
ಕನ್ನಡ ದುನಿಯಾ       Mobile App
       

Kannada Duniya

ನಿಜ ಜೀವನದ ಪುನ್ಸುಕ್ ವಾಂಗ್ಡುರಿಂದ ಮತ್ತೊಂದು ಸಾಹಸ

idiot

‘3 ಈಡಿಯಟ್ಸ್’ ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ. ಇದರಲ್ಲಿ ಪುನ್ಸುಕ್ ವಾಂಗ್ಡು ಎಂಬ ಪಾತ್ರವೊಂದಿದೆ, ಇಡೀ ಸಿನಿಮಾಕ್ಕೆ ಪ್ರೇರಣೆಯಾದ ಪಾತ್ರ ಅದು. ಆ ಪಾತ್ರದ ನಿಜರೂಪವೇ ಸೋನಂ ವಾಂಗ್ ಚುಕ್. ಲೇಹ್ ನ ಎಂಜಿನಿಯರ್ ಸೋನಂ ವಾಂಗ್ ಚುಕ್, ಲಡಾಕ್ ನಲ್ಲಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದರು. ಅವರ ಸಾಧನೆಯಿಂದ ಪ್ರೇರಣೆ ಪಡೆದು ‘ತ್ರೀ ಈಡಿಯಟ್ಸ್’ ಚಿತ್ರ ಜನ್ಮ ತಳೆದಿತ್ತು.

ಇದೀಗ ಪರ್ವತಗಳ ಅಭಿವೃದ್ಧಿಗಾಗಿ ಹೊಸ ವಿಶ್ವವಿದ್ಯಾನಿಲಯ ಸ್ಥಾಪಿಸುವುದಾಗಿ ಸೋನಂ ವಾಂಗ್ ಚುಕ್ ಘೋಷಿಸಿದ್ದಾರೆ. ‘ಹಿಮಾಲಯನ್ ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್, ಲಡಾಕ್’ ಅನ್ನೋದು ಅವರ ಕನಸಿನ ಯೋಜನೆ. ಪರ್ವತಾಭಿವೃದ್ಧಿಗಾಗಿಯೇ ಆರಂಭವಾಗುತ್ತಿರುವ ಪರ್ಯಾಯ ಯೂನಿವರ್ಸಿಟಿ. ವಿದ್ಯಾರ್ಥಿಗಳು ಶ್ರಮಪಟ್ಟು ಬೆವರು ಹರಿಸಿದ್ರೆ ಅದೇ ಇಲ್ಲಿ ಶುಲ್ಕ ಪಾವತಿಸಿದಂತೆ.

ಪರ್ವತಗಳಲ್ಲಿ ಎದುರಾಗುವ ನೈಜ ಸಮಸ್ಯೆಗಳಿಗೆ ಪರಿಹಾರ ಹುಡುಕುವುದರಲ್ಲಿ ವಿದ್ಯಾರ್ಥಿಗಳು ನಿರತರಾಗಲಿದ್ದಾರೆ. ಈ ಯೋಜನೆ ಭಾರತದ ಭವಿಷ್ಯ ಹಾಗೂ ಉನ್ನತ ಶಿಕ್ಷಣದ ರೂಪುರೇಷೆಯನ್ನೇ ಬದಲಾಯಿಸಲಿದೆ ಅಂತಾ ವಾಂಗ್ ಚುಕ್ ಹೇಳಿದ್ದಾರೆ. ಲಡಾಕ್ ನಲ್ಲಿ ಮಂಜುಗಡ್ಡೆಯ ಸ್ತೂಪಗಳನ್ನು ಆವಿಷ್ಕರಿಸಿದ ವಾಂಗ್ ಚುಕ್ ಅವರಿಗೆ ಅಮೆರಿಕದ ಪ್ರತಿಷ್ಠಿತ ರೋಲೆಕ್ಸ್ ನಾವೀನ್ಯತಾ ಪ್ರಶಸ್ತಿ ಲಭಿಸಿದೆ. ವಾಂಗ್ ಚುಕ್ ಅವರ ಹೊಸ ಯೋಜನೆಯನ್ನು ಬೆಂಬಲಿಸಿರುವ ಸರ್ಕಾರ, ವಿವಿ ಸ್ಥಾಪನೆಗಾಗಿ 200 ಎಕರೆ ಭೂಮಿ ನೀಡಲು ಮುಂದಾಗಿದೆ. ಈ ಯೂನಿವರ್ಸಿಟಿ ಲಡಾಕ್ ನ ಯುವಜನತೆಗೆ ದಾರಿದೀಪವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...