alex Certify
ಕನ್ನಡ ದುನಿಯಾ       Mobile App
       

Kannada Duniya

ಆಲಸಿಗಳ ಸ್ನೇಹ ಮಾಡಿದ್ರೆ ನಿಮಗೂ ಕಾದಿದೆ ಸಮಸ್ಯೆ

office-580x395

ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೆಲ್ಲ ಆಲಸಿಗಳಾ? ಹಾಗೇನಾದ್ರೂ ಇದ್ರೆ ಅಂಥವರಿಂದ ನೀವು ದೂರ ಇರೋದೇ ಒಳ್ಳೆಯದು. ಇದು ನಾವ್ ಹೇಳ್ತಿರೋದಲ್ಲ, ಇತ್ತೀಚೆಗೆ ನಡೆದ ಸಂಶೋಧನೆಯೊಂದರಲ್ಲಿ ಸಾಬೀತಾಗಿದೆ. ಜನರು ಇತರರ ವರ್ತನೆಯನ್ನು ಮಾತ್ರ ಗಮನಿಸಿ ಅದನ್ನು ಫಾಲೋ ಮಾಡ್ತಾರೆ ಅಂತಾ ನಾವೆಲ್ಲ ಅಂದುಕೊಂಡಿದ್ದೇವೆ.

ಆದ್ರೆ ಇತರರ ವರ್ತನೆ ಮಾತ್ರವಲ್ಲ, ಆಲಸಿತನ, ಚಡಪಡಿಕೆ ಮತ್ತು ಬುದ್ಧಿವಂತಿಕೆಯನ್ನು ಅನುಸರಿಸುತ್ತಾರೆ. ಇದರಿಂದ ಅವರ ವರ್ತನೆಯಲ್ಲೂ ಸಹಜವಾಗಿಯೇ ಆಲಸ್ಯ ಕಾಣಿಸಿಕೊಳ್ಳುತ್ತದೆ. ಫ್ರಾನ್ಸ್ ನ ಆರೋಗ್ಯ ವಿಶ್ವವಿದ್ಯಾನಿಲಯವೊಂದು ನಡೆಸಿದ ಸಂಶೋಧನೆಯಿಂದ ಇದು ದೃಢಪಟ್ಟಿದೆ.

ಈ ಸಂಶೋಧನೆಯ ಪ್ರಕಾರ ಆಲಸ್ಯತನವೊಂದು ಸಾಂಕ್ರಾಮಿಕ ರೋಗ. ಆಲಸಿತನ ಮತ್ತು ಅಸ್ವಸ್ಥತೆ ನಮ್ಮನ್ನು ಬಹುಬೇಗ ಆವರಿಸಿಕೊಳ್ಳುತ್ತದೆ. ಆಲಸ್ಯದಿಂದ ಆರ್ಥಿಕ ನಷ್ಟ ಕಟ್ಟಿಟ್ಟ ಬುತ್ತಿ. ಆಲಸಿತನ ಕೇವಲ ಅವರ ಮೇಲೆ ಮಾತ್ರವಲ್ಲ ಇತರರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ಆಲಸಿಗಳಾಗಬೇಡಿ, ಜೊತೆಗೆ ಆಲಸಿಗಳ ಸಂಗ ಮಾಡಬೇಡಿ. ಅಂಥವರಿಂದ ದೂರವಿರುವುದೇ ನಿಮಗೆ ಒಳಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...