alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಗಾಗಿ ಚಿತ್ರ ವಿಚಿತ್ರ ಕಾನೂನು !

law for woman

ವಿಶ್ವದ ವಿವಿಧೆಡೆ ಮಹಿಳೆಯರ ವಿರುದ್ಧ ಚಿತ್ರ ವಿಚಿತ್ರ ಕಾನೂನು ಜಾರಿಯಲ್ಲಿದೆ. ಪುರುಷನ ಸಮಾನವಾಗಿ ಮಹಿಳೆ ನಿಂತಿದ್ದರೂ ಈ ಕಾನೂನುಗಳನ್ನು ಆಕೆ ಪಾಲಿಸಲೇ ಬೇಕಾಗಿದೆ.

ರಷ್ಯಾದಲ್ಲಿ ಮಹಿಳೆ ವಾಹನ ಚಲಾಯಿಸುವಂತಿಲ್ಲ. ಟ್ರ್ಯಾಕ್ಟರ್, ಟ್ರೈನ್, ಟ್ರಕ್ ಯಾವುದೇ ಇರಲಿ ಮಹಿಳೆ ಅದನ್ನು ಓಡಿಸುವಂತಿಲ್ಲ. ಕೇವಲ ಡ್ರೈವರ್ ಒಂದೇ ಅಲ್ಲ, ಮಹಿಳೆ ಕೊಳಾಯಿ ಕೆಲಸ ಮತ್ತು ಮರಗೆಲಸವನ್ನೂ ಮಾಡುವಂತಿಲ್ಲ.

ಬಹಮಾಸ್ ಪ್ರಸಿದ್ಧ ಪ್ರವಾಸಿ ತಾಣ. ಆದರೆ ಇಲ್ಲಿ ಮಹಿಳೆ ವಿರುದ್ಧ ಒಂದು ಕಾನೂನಿದೆ. ಪತಿಯಾದವನು ಪತ್ನಿ ಮೇಲೆ ದೈಹಿಕ ಕಿರುಕುಳ ನೀಡಬಹುದು. 14 ವರ್ಷ ಮೇಲ್ಪಟ್ಟ ಹುಡುಗಿ ಮೇಲೆ ದೈಹಿಕ ದೌರ್ಜನ್ಯ ನಡೆಸಿದರೆ ಅದು, ವೈವಾಹಿಕ ಅತ್ಯಾಚಾರವಾಗುವುದಿಲ್ಲ.

ಯುನೈಟೆಡ್ ಕಿಂಗ್ಡಮ್ ರಲ್ಲಿ ಮಹಿಳೆಯರು ರಾಯಲ್ ಮೆರೀನ್ ಸೇರುವಂತಿಲ್ಲ. ಇದು ಕಾನೂನಿಗೆ ವಿರುದ್ಧ.

ನೈಜೀರಿಯಾದಲ್ಲಿ ಮಹಿಳೆಯರ ವಿರುದ್ಧ ಕೌಟುಂಬಿಕ ಹಿಂಸಾಚಾರ ನಡೆದರೆ ಅದನ್ನು ಕ್ರೈಂ ಎಂದು ಪರಿಗಣಿಸುವುದಿಲ್ಲ.

ಅಪಘಾನಿಸ್ತಾನದಲ್ಲಿ ಗಂಡನ ಮನೆ ಬಿಟ್ಟು ಹೋಗಲು ಇಷ್ಟಪಟ್ಟರೂ ಹೆಂಡತಿ, ಮನೆಯಿಂದ ಹೋಗುವಂತಿಲ್ಲ.

ಯುರೋಪಿನ ಮಾಲ್ಟಾದಲ್ಲಿ ಮಹಿಳೆಯರನ್ನು ಅಪಹರಿಸುವ ಸ್ವಾತಂತ್ರ್ಯ ಪುರುಷರಿಗಿದೆ. ಮಹಿಳೆ ಮೇಲೆ ಅತ್ಯಾಚಾರ ಕೂಡ ಮಾಡಬಹುದು. ಆಕೆ ಜೊತೆ ಮದುವೆಯಾಗದೇ ವಾಸಿಸುವ ಸ್ವಾತಂತ್ರ್ಯವೂ ಆತನಿಗಿದೆ.

ಸೌದಿ ಅರೇಬಿಯಾ ಮಧ್ಯಪೂರ್ವ ದೇಶಗಳಲ್ಲೂ ಮಹಿಳೆಯರು ಚಾಲನೆ ಮಾಡುವಂತಿಲ್ಲ, ಅವರ ವಿರುದ್ಧ ಫತ್ವಾ ಜಾರಿಯಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...