alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವೀಟರ್ ನಲ್ಲಿ ವೈರಲ್ ಆದ ಫೋಟೋ ನೋಡಿ ಸಚಿವರು ಭಾವುಕರಾಗಿದ್ದೇಕೆ?

viral_ortmasm

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋವೊಂದು ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ.ಟಿ ರಾಮ್ ರಾವ್ ಅವರನ್ನು ಭಾವುಕರಾಗುವಂತೆ ಮಾಡಿದೆ. ಫೋಟೋ ನೋಡಿ ಭಾವುಕರಾದ ಸಚಿವರು,ಶಾಲೆಯ ಸಮಯವನ್ನು ಬದಲಾಯಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಳಿಯಲ್ಲಿ ಬೇಗ ಎದ್ದು ಮಕ್ಕಳು ಶಾಲೆಗೆ ಹೋಗುವುದು ಕಷ್ಟ. ಸರಿಯಾಗಿ ನಿದ್ರೆ ಹಾಗೂ ಆಹಾರ ಸೇವಿಸದೆ ಮಕ್ಕಳು ಶಾಲೆಗೆ ಹೋಗ್ತಾರೆ. ಅದ್ರಲ್ಲೂ ಚಿಕ್ಕ ಮಕ್ಕಳ ಸ್ಥಿತಿ ಪ್ರೆಶರ್ ಕುಕ್ಕರಿನಂತಾಗಿದೆ. ಬಾಲ್ಯದಲ್ಲಿಯೇ ಮಕ್ಕಳ ಮೇಲೆ ಒತ್ತಡ ಹೇರಲಾಗ್ತಾ ಇದೆ. ಮಕ್ಕಳಿಗೆ ಬಾಲ್ಯ ನೀಡಬೇಕು. ಯಾಕೆ ಶಾಲಾ ಸಮಯ ಬದಲಾಯಿಸಬಾರದೆಂದು ರಾಮ್ ರಾವ್ ಪ್ರಶ್ನೆಯಿಟ್ಟಿದ್ದಾರೆ. ಬೆಳಿಗ್ಗೆ 10-5.30 ರವರೆಗೆ ಶಾಲೆ ನಡೆದ್ರೆ ಏನು ತೊಂದರೆ ಎಂದಿದ್ದಾರೆ ಸಚಿವರು.

ಕೆ.ಟಿ.ರಾಮ್ ರಾವ್ ಅವರಿಗೆ ವ್ಯಕ್ತಿಯೊಬ್ಬರು ಫೋಟೋವೊಂದನ್ನು ಟ್ಯಾಗ್ ಮಾಡಿದ್ದರು. ಇದನ್ನು ರೀ ಟ್ವಿಟ್ ಮಾಡಿದ ಸಚಿವರು ಫೋಟೋ ನೋಡಿ ಭಾವುಕರಾಗಿದ್ದಾರೆ. ವಾಸ್ತವವಾಗಿ ಬೆಳ್ಳಂಬೆಳಿಗ್ಗೆ ಎದ್ದು ಶಾಲೆಗೆ ಬಂದ ಮಗು ಪ್ರಾರ್ಥನೆಗೆ ನಿಂತಿದೆ. ಕೈ ಮುಗಿದು ನಿಂತಿರುವ ಮಗು ನಡುಗುತ್ತಿದೆ. ಜೊತೆಗೆ ಅದು ಸರಿಯಾಗಿ ಆಹಾರ ಸೇವನೆ ಮಾಡಿಲ್ಲ. ಯಾಕೆಂದ್ರೆ ಅರ್ಧ ತಿಂದ ರೊಟ್ಟಿ ಕಿಸೆಯಲ್ಲಿರುವುದು ಫೋಟೋದಲ್ಲಿ ಸ್ಪಷ್ಟವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...