alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸ ಸುಲಭ ಮಾಡುತ್ತೆ ಕಿಬೋರ್ಡ್ ಶಾರ್ಟ್ ಕಟ್

ಕೆಲಸ ಮಾಡುವವರಾಗಿರಲಿ ಇಲ್ಲ ಮಾಡದೆ ಇರುವವರಾಗಿರಲಿ ಕಂಪ್ಯೂಟರ್ ಬಳಸಿಯೇ ಬಳಸ್ತಿರಾ. ಕಂಪ್ಯೂಟರ್ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಕೆಲಸ ಸುಲಭವಾಗುತ್ತದೆ. ಅದ್ರಲ್ಲೂ ಕಿಬೋರ್ಟ್ ಶಾರ್ಟ್ ಕಟ್ ನಿಮಗೆ ನೆರವಾಗುತ್ತದೆ. ವಿಂಡೋ ಕಂಪ್ಯೂಟರ್ ನಲ್ಲಿ ನೀವು ಕೆಲಸ ಮಾಡ್ತಿದ್ದವರಾಗಿದ್ದರೆ ವಿಂಡೋಸ್ ಬಟನ್ ಜೊತೆ ಎಲ್ ಬಟನ್ ಒತ್ತಿದ್ರೆ ಕಂಪ್ಯೂಟರ್ ಲಾಕ್ ಆಗುತ್ತದೆ. ಮತ್ತೆ ಪಾಸ್ವರ್ಡ್ ಹೊಡೆದೇ ನೀವು ಕಂಪ್ಯೂಟರ್ ಆನ್ ಮಾಡಬೇಕಾಗುತ್ತದೆ.

ಕಂಪ್ಯೂಟರ್ ಪರದೆ ಮೇಲೆ ಒಂದಲ್ಲ ಎರಡಲ್ಲ ಐದಾರು ವಿಂಡೋಸ್ ಓಪನ್ ಆಗಿರುತ್ತದೆ. ಒಂದೊಂದನ್ನೇ ಮಿನಿಮೈಸ್ ಮಾಡೋದಕ್ಕೆ ಸಮಯ ಹಿಡಿಯುತ್ತದೆ. ಎಲ್ಲ ವಿಂಡೋಸ್ ಮಿನಿಮೈಸ್ ಮಾಡಲು ಬಯಸಿದ್ದರೆ ವಿಂಡೋಸ್ ಬಟನ್ ಜೊತೆ ಡಿ ಬಟನ್ ಒತ್ತಿ. ಓಪನ್ ಆಗಿದ್ದ ಎಲ್ಲ ವಿಂಡೋಗಳು ಒಂದೇ ಬಾರಿ ಮಿನಿಮೈಸ್ ಆಗುತ್ತವೆ.

ಒಂದು ವಿಂಡೋದಿಂದ ಇನ್ನೊಂದು ವಿಂಡೋಗೆ ಹೋಗಲು ಕಷ್ಟಪಡಬೇಕಾಗಿಲ್ಲ. ALT ಬಟನ್ ಜೊತೆ TAB ಬಟನ್ ಒತ್ತಿದ್ರೆ ಸಾಕು. ಸುಲಭವಾಗಿ ವಿಂಡೋ ಬದಲಿಸಬಹುದು.

ಯಾವುದೋ ವೆಬ್ ಸೈಟ್ ಜೂಮ್ ಮಾಡಿ ನೋಡಲು ಬಯಸಿದ್ರೆ ಕಿಬೋರ್ಡ್ ನಲ್ಲಿರುವ CLTR ಬಟನ್ ಜೊತೆ ಪ್ಲಸ್ ಬಟನ್ ಪ್ರೆಸ್ ಮಾಡಿದ್ರೆ ಸಾಕು. ನೀವು ನೋಡ ಬಯಸಿರುವ ವೆಬ್ ಸೈಟ್ ದೊಡ್ಡದಾಗಿ ಕಾಣುತ್ತದೆ.

ಯಾವುದಾದ್ರೂ ಫೈಲ್ ಗೆ ಹೊಸ ಹೆಸರು ಇಡಲು ಬಯಸಿದ್ದರೆ ಫೈಲ್ ಸೆಲೆಕ್ಟ್ ಮಾಡಿ ಎಫ್ 2 ಬಟನ್ ಒತ್ತಿ. ಆ ಫೈಲ್ ನ ಹಳೆ ಹೆಸರು ತೋರಿಸುತ್ತದೆ. ಅಲ್ಲಿ ಹೆಸರನ್ನು ಸುಲಭವಾಗಿ ಬದಲಿಸಬಹುದು.

ಎಫ್ 5 ಬಟನ್ ಪ್ರೆಸ್ ಮಾಡಿದ್ರೆ ನಿಮ್ಮ ಕಂಪ್ಯೂಟರ್ ರೀಪ್ರೆಶ್ ಆಗಲಿದೆ.

ವಿಂಡೋ ಫುಲ್ ಸ್ಕ್ರೀನ್ ಕಾಣಬೇಕೆಂದ್ರೆ ಎಫ್ 11 ಬಟನ್ ಪ್ರೆಸ್ ಮಾಡಿದ್ರೆ ಆಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...