alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ನಲ್ಲೇ ಆಧಾರ್ ಕಾರ್ಡ್ ವಿಳಾಸ ಬದಲಾಯಿಸಿಕೊಳ್ಳಿ

adhar

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಲಿಂಗ, ವಿಳಾಸ, ಜನ್ಮ ದಿನಾಂಕ, ಮೊಬೈಲ್ ನಂಬರ್, ಇ-ಮೇಲ್ ಐಡಿಯಲ್ಲೇನಾದ್ರೂ ತಪ್ಪುಗಳಿದ್ರೆ ಅದನ್ನು ಆನ್ ಲೈನ್ ನಲ್ಲೇ ಸರಿಪಡಿಸಿಕೊಳ್ಳಬಹುದು. ವಿಳಾಸ ಬದಲಾವಣೆಯನ್ನು ಕೂಡ ಮಾಡಿಕೊಳ್ಳಬಹುದು.

ಇದಕ್ಕಾಗಿ ನೀವು UIADI ಪೋರ್ಟಲ್ ನಲ್ಲಿ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಆದ್ರೆ ಮೊಬೈಲ್ ನಂಬರ್ ಬದಲಾವಣೆ ಮತ್ತು ಲಿಂಗ ಬದಲಾವಣೆಗೆ ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ.

ಮೊದಲು UIADI ಅಧಿಕೃತ ವೆಬ್ ಸೈಟ್ ಗೆ ವಿಸಿಟ್ ಮಾಡಿ.

https://ssup.uiadi.gov.in/web/guest/update

ಆಧಾರ್ ಡಿಟೇಲ್ಸ್ ಅಪ್ ಲೋಡ್ ಎಂಬುದರ ಮೇಲೆ ಕ್ಲಿಕ್ ಮಾಡಿ.

ವನ್ ಟೈಮ್ ಪಾಸ್ ವರ್ಡ್ (ಓಟಿಪಿ) ಜನರೇಟ್ ಮಾಡಲು ನಿಮ್ಮ ಆಧಾರ್ ನಂಬರ್ ಅನ್ನು ನಮೂದಿಸಿ.

ಓಟಿಪಿ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುತ್ತದೆ.

ಓಟಿಪಿ ಬಂದ ಬಳಿಕ ಅದನ್ನು ವೆರಿಫಿಕೇಶನ್ ಬಾಕ್ಸ್ ನಲ್ಲಿ ನಮೂದಿಸಿ.

ಆಗ ಹೆಸರು ಬದಲಾವಣೆ, ಜನ್ಮದಿನಾಂಕ, ಲಿಂಗ, ವಿಳಾಸ ಬದಲಾವಣೆ ಹೀಗೆ ವಿವಿಧ ಆಯ್ಕೆಗಳು ಬರುತ್ತವೆ.

ಅಲ್ಲಿ ನಿಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಿ.

ನಿಮ್ಮ ಹೊಸ ವಿಳಾಸದ ವಿವರವನ್ನು ಭರ್ತಿ ಮಾಡಿ.

ಮುಂದಿನ ಹಂತದಲ್ಲಿ ನೀವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ನಿಮಗೆ ಎರಡು ಬಿಪಿಓ ಸರ್ವೀಸ್ ಪ್ರೊವೈಡರ್ ಸೆಲೆಕ್ಷನ್ ಇದ್ದು, ಅದರಲ್ಲಿ ಒಂದನ್ನು ಕ್ಲಿಕ್ ಮಾಡಿ.

ಕೊನೆಗೆ ಅಂತಿಮವಾಗಿ ಸಲ್ಲಿಸಬಹುದು.

ಪ್ರಕ್ರಿಯೆ ಪೂರ್ಣಗೊಂಡ ನಂತರ ಯು ಆರ್ ಎನ್ ನಂಬರ್ ದೊರೆಯುತ್ತದೆ.

ಬದಲಾವಣೆ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲು ಈ ನಂಬರ್ ಅನ್ನು ನೆನಪಿನಲ್ಲಿಟ್ಟುಕೊಳ್ಳಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...