alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜ್ ಹುಡುಗಿಯರಿಗೆ ಬಾಯ್ ಫ್ರೆಂಡ್ ಯಾಕೆ ಬೇಕು?

images

ಹೈಸ್ಕೂಲು ಮುಗಿದು ಕಾಲೇಜು ಮೆಟ್ಟಿಲೇರಿದ ಹುಡುಗ-ಹುಡುಗಿಯನ್ನು ಹಿಡಿಯೋದು ಕಷ್ಟ. ಮನಸ್ಸು ಎಲ್ಲೆ ಮೀರಿ ಓಡ್ತಾ ಇರುತ್ತದೆ. ಇಷ್ಟವಾಗುವ ಡ್ರೆಸ್ ಧರಿಸಲು ಅವಕಾಶವಿರುತ್ತದೆ. ಪಾಲಕರು ಮಕ್ಕಳ ಮೇಲೆ ಹೇರಿದ್ದ ಕೆಲ ನಿಯಮಗಳನ್ನು ಸಡಿಲಿಸ್ತಾರೆ. ಕಾಲೇಜಿನ ಮೆಟ್ಟಿಲು ಏರ್ತಾ ಇದ್ದಂತೆ ಹೊಸ ಹೊಸ ಸ್ನೇಹಿತರು ಸಿಗ್ತಾರೆ. ಅದ್ರಲ್ಲೂ ಹುಡುಗಿಯರು ಹೆಚ್ಚಾಗಿ ಹುಡುಗರ ಸ್ನೇಹ ಬೆಳೆಸಲು ಮುಂದಾಗ್ತಾರೆ.

ಪಾಲಕರ ಜೊತೆ ಹೇಳಿಕೊಳ್ಳಲಾಗದ ಅನೇಕ ಮಾತುಗಳು ಹುಡುಗಿಯರಲ್ಲಿ ಅಡಗಿರುತ್ತವೆ. ಅದನ್ನು ಹೇಳಿಕೊಳ್ಳಲು ಅವರಿಗೊಬ್ಬ ಸ್ನೇಹಿತ ಬೇಕು. ತನ್ನೆಲ್ಲ ಮನಸ್ಸಿನ ಮಾತುಗಳನ್ನು ಕೇಳುವ ಸ್ನೇಹಿತನಿಗಾಗಿ ಹುಡುಗಿಯರು ಹುಡುಕಾಟ ನಡೆಸ್ತಾರೆ.

ಕಾಲೇಜಿಗೆ ಬರ್ತಾ ಇದ್ದಂತೆ ಹುಡುಗ-ಹುಡುಗಿಯರು ಸುತ್ತಾಡೋದು, ಮೋಜು ಮಸ್ತಿ ಮಾಡೋದಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಪ್ರತಿ ಬಾರಿ ತನ್ನ ಬಾಯ್ ಫ್ರೆಂಡ್ ಬಿಟ್ಟು ಬೆಸ್ಟ್ ಫ್ರೆಂಡ್ ಜೊತೆ ಬರಲು ಸ್ನೇಹಿತೆ ಒಪ್ಪೋದಿಲ್ಲ. ಕೈಕೊಟ್ಟ ಸ್ನೇಹಿತೆ ಜಾಗ ತುಂಬಿ ಒಂಟಿತನ ಹೋಗಲಾಗಿಸಲು ಬಾಯ್ ಫ್ರೆಂಡ್ ಬೇಕು ಎನ್ನುತ್ತಾರೆ ಹುಡುಗಿಯರು.

ಅನೇಕ ಹುಡುಗಿಯರು ಸಿನಿಮಾಗಳಿಂದ ಪ್ರೇರಿತರಾಗ್ತಾರೆ. ತಮ್ಮ ನೆಚ್ಚಿನ ನಟನಂತಹ ಬಾಯ್ ಫ್ರೆಂಡ್ ತಮಗೂ ಬೇಕು ಎನ್ನುವ ಕಾರಣಕ್ಕೆ ಹುಡುಗರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ತಾರೆ.

ಸುರಕ್ಷತೆ ದೃಷ್ಟಿಯಿಂದಲೂ ಬಾಯ್ ಫ್ರೆಂಡ್ ಬೇಕು ಎನ್ನುವ ಹುಡುಗಿಯರಿದ್ದಾರೆ. ಬಾಯ್ ಫ್ರೆಂಡ್ ಜೊತೆಗಿದ್ದರೆ ಬೇರೆ ಹುಡುಗರು ಕೆಟ್ಟದಾಗಿ ವ್ಯವಹರಿಸೊಲ್ಲ ಎಂಬ ನಂಬಿಕೆ ಹುಡುಗಿಯರದ್ದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...