alex Certify
ಕನ್ನಡ ದುನಿಯಾ       Mobile App
       

Kannada Duniya

26-30 ಲಕ್ಷ ರೂ.ಗೆ ಮಾರಾಟವಾಗುತ್ತೆ ಈ ”ಹಿಮಾಲಯಿ ವಯಾಗ್ರ”

ಮಾರುಕಟ್ಟೆಯಲ್ಲಿ ಇಲ್ಲ ಆನ್ಲೈನ್ ನಲ್ಲಿ ಈಗ ಎಲ್ಲ ವಸ್ತುಗಳೂ ಸಿಗುತ್ವೆ. ಯಾವ ವಸ್ತುವೂ ಸಿಗಲ್ಲ ಎನ್ನುವ ಹಾಗಿಲ್ಲ. ಆದ್ರೆ ಈ ದುಬಾರಿ ಬೆಲೆಯ ವಸ್ತು ಯಾವುದೇ ಅಂಗಡಿಯಲ್ಲಾಗ್ಲಿ ಇಲ್ಲ ಆನ್ಲೈನ್ ಶಾಪ್ ನಲ್ಲಾಗ್ಲಿ ಸಿಗೋದಿಲ್ಲ. ಭಾರತದಲ್ಲಿ ಮಾತ್ರ ಸಿಗುವ ಈ ಕೀಟಕ್ಕೆ ಬಹು ಬೇಡಿಕೆ. ವಿಶ್ವದಾದ್ಯಂತ ಜನರು ಲಕ್ಷಾಂತರ ರೂಪಾಯಿ ಪಾವತಿಸಿ ಈ ಕೀಟವನ್ನು ಖರೀದಿ ಮಾಡ್ತಾರೆ. ಪ್ರತಿ ಕಿಲೋಗೆ ಈ ಕೀಟದ ಬೆಲೆ 26ರಿಂದ 30 ಲಕ್ಷ ರೂಪಾಯಿ.

ಹಿಮಾಲಯ ಪರ್ವತದಲ್ಲಿ ಕಾಣಸಿಗುವ ಈ ಅಪರೂಪದ ಕೀಟ ಕಂದು ಬಣ್ಣದಲ್ಲಿರುತ್ತದೆ. ಇದು ಸುಮಾರು 2 ಇಂಚು ಉದ್ದವಿರುತ್ತದೆ.ಈ ಕೀಟದ ಅರ್ಧ ಭಾಗ ಸಸಿಯಂತೆ ಕಾಣುತ್ತದೆ. ವಿಶೇಷ ಔಷಧಿಗೆ ಬಳಸುವ ಈ ಕೀಟವನ್ನು ಹುಡುಕಲು ಜನರು ಅನೇಕ ದಿನ ಕಾಡಿನಲ್ಲಿ ಕಾಲ ಕಳೆಯುತ್ತಾರೆ.

ಇದು ದೇಹದಲ್ಲಿ ಶಕ್ತಿ ಉತ್ಪತ್ತಿಗೆ ನೆರವಾಗುತ್ತದೆ. ಇದು ವಯಾಗ್ರದ ರೂಪದಲ್ಲಿ ಕೆಲಸ ಮಾಡುತ್ತದೆ. ಈ ಕೀಟದ ಹೆಸರು ಯಾಸರ್ಗುಂಬಾ. ಇದು ಸುಲಭವಾಗಿ ಸಿಗದ ಕಾರಣ ಜನರು ಇದಕ್ಕೆ ಲಕ್ಷಾಂತರ ರೂಪಾಯಿ ನೀಡಲು ಸಿದ್ಧರಿದ್ದಾರೆ. ಇದ್ರ ಜೀವಿತಾವಧಿ 6 ತಿಂಗಳು. ಸತ್ತ ನಂತ್ರ ಅದನ್ನು ಬಿಸಿಲಿಗೆ ಒಣಗಿಸಿ, ಪುಡಿ ಮಾಡಿ ಔಷಧಿ ರೂಪದಲ್ಲಿ ಬಳಸಲಾಗುತ್ತದೆ. ಇದ್ರ ಸೇವನೆಯಿಂದ ಸೆಕ್ಸ್ ಪವರ್ ಹೆಚ್ಚುತ್ತದೆ. ಇದನ್ನು ಹಿಮಾಲಯಿ ವಯಾಗ್ರ ಎಂದು ಕರೆಯಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...