alex Certify
ಕನ್ನಡ ದುನಿಯಾ       Mobile App
       

Kannada Duniya

ಬೇರೆಯವರಿಗೆ ರಕ್ತ ನೀಡಲು ಬೆವರು ಸುರಿಸುತ್ತಿದ್ದಾನೆ ಈ ಯುವಕ

ಎಷ್ಟು ಬ್ಲಡ್ ಬ್ಯಾಂಕ್ ಇದ್ರೂ ಅನೇಕ ಬಾರಿ ಸಮಯಕ್ಕೆ ಸರಿಯಾಗಿ ರಕ್ತ ಸಿಗೋದಿಲ್ಲ. ಈ ಸಮಸ್ಯೆಯನ್ನು ದೂರ ಮಾಡಲು ವ್ಯಕ್ತಿಯೊಬ್ಬ ಬೆವರು ಹರಿಸಿ ಕೆಲಸ ಮಾಡ್ತಿದ್ದಾನೆ. ನೋಯ್ಡಾ ವಿಶ್ವವಿದ್ಯಾನಿಲಯದ ಮಾರ್ಕೆಟಿಂಗ್ ಮುಖ್ಯಸ್ಥ 33 ವರ್ಷದ ಯುವಕ ಲಕ್ಷಾಂತರ ಮಂದಿಗೆ ಮಾದರಿಯಾಗಿದ್ದಾನೆ.

ಕಿರಣ್ ವರ್ಮಾ, ಜನರಿಗೆ ರಕ್ತ ದಾನದ ಕುರಿತು ಜಾಗೃತಿ ಮೂಡಿಸಲು ಸಾವಿರಾರು ಕಿಲೋಮೀಟರ್ ಕಾಲ್ನಡಿಗೆ ಪ್ರಯಾಣ ಶುರು ಮಾಡಿದ್ದಾನೆ. ಭಾರತದಲ್ಲಿ ಪ್ರತಿ ವರ್ಷ ರಕ್ತದ ಕೊರತೆಯಿಂದ 1200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದನ್ನು ಗಮನಿಸಿರುವ ಕಿರಣ್ ಮಹತ್ವದ ಕಾರ್ಯ ಶುರು ಮಾಡಿದ್ದಾರೆ.

ಕಿರಣ್ ಮೊಬೈಲ್ ಆ್ಯಪ್ ಸಿಂಪಲ್ ಬ್ಲಡ್ ಸಂಸ್ಥಾಪಕ. ಈ ಮೊಬೈಲ್ ಆ್ಯಪ್ ಮೂಲಕ ರಕ್ತದಾನಿಗಳನ್ನು ಕಿರಣ್ ಸಂಪರ್ಕಿಸುತ್ತಿದ್ದಾನೆ. 1.5 ಲಕ್ಷಕ್ಕೂ ಹೆಚ್ಚು ಜನರನ್ನು ಇದ್ರ ಜೊತೆ ಸೇರಿಸುವುದು ಕಿರಣ್ ಉದ್ದೇಶವಾಗಿದೆ. ಕಿರಣ್ ಸಿಂಪಲ್ ಬ್ಲಡ್ ಆ್ಯಪ್ 11 ದೇಶದ ಸುಮಾರು 2000 ಜನರ ಜೀವ ಉಳಿಸಿದೆ. ಜನವರಿ 26,2018 ರಂದು ಕಿರಣ್ ಶ್ರೀನಗರದಿಂದ ತನ್ನ ಕಾಲ್ನಡಿಗೆ ಶುರು ಮಾಡಿದ್ದ. ಮೂರು ತಿಂಗಳೊಳಗೆ 7000 ಕಿಲೋಮೀಟರ್ ಸಂಚರಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...