alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಸೆಗೆ ಮಾವ ನೀಡಿದ ಇಂಥ ಉಡುಗೊರೆ

anshu_jamsenpa2

ಸಮಾಜದಲ್ಲಿ ಸೊಸೆಯಾದವಳು ಮಾವನನ್ನು ನೋಡುವ ದೃಷ್ಟಿಯೇ ಬೇರೆ. ಮಾವನ ಹೆಸರು ಕೇಳ್ತಿದ್ದಂತೆ ಕೆಲವರು ಭಯಪಟ್ಟರೆ ಮತ್ತೆ ಕೆಲವರು ಮೂಗು ಮುರಿಯುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಾವನಾದವನು ಸೊಸೆಯನ್ನು ಮಗಳಂತೆ ನೋಡಿಕೊಳ್ಳುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ರಾಜಸ್ತಾನದ ಮಾವನೊಬ್ಬ ಎಲ್ಲರಿಗೂ ಮಾದರಿಯಾಗಿದ್ದಾನೆ.

ತನ್ನ ಸೊಸೆಯ ಜೀವ ಉಳಿಸಲು ಮಾವ ಕಿಡ್ನಿ ದಾನ ಮಾಡಿದ್ದಾನೆ. 28 ವರ್ಷದ ಸೊಸೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಳು. ಕಿಡ್ನಿ ದಾನ ಮಾಡಲು ಯಾರೂ ಮುಂದೆ ಬರಲಿಲ್ಲ. ಈ ವೇಳೆ ಮಾವ ಹೆಮದಾಸ್ ವೈಷ್ಣವ್ ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದಾನೆ.

ಬೆದಮಿ ತಂದೆ, ತಾಯಿ, ಸಹೋದರಿಯರು ಕಿಡ್ನಿ ದಾನ ಮಾಡಲು ಮನಸ್ಸು ಮಾಡಲಿಲ್ಲ. ಆದ್ರೆ ಬೆದಮಿ ಮಾವ ಹೆಮದಾಸ್ ಕಿಡ್ನಿ ನೀಡಲು ಮುಂದಾಗಿದ್ದಾರೆ. ಸೊಸೆ ಕುಟುಂಬದ ಮಗಳಿದ್ದಂತೆ.ಆಕೆ ನನ್ನ ಮಗನ ಪತ್ನಿ. ನನ್ನ ಮೊಮ್ಮಕ್ಕಳ ತಾಯಿ. ಆಕೆ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿದ್ದಂತೆ ಎಂದಿದ್ದಾರೆ ಹೆಮದಾಸ್.

ಹೆಮದಾಸ್ ತ್ಯಾಗಕ್ಕೆ ಬೆದಮಿ ಕಣ್ಣಲ್ಲಿ ನೀರು ಬಂದಿದೆ. ಮಾವ ಕಿಡ್ನಿ ದಾನ ಮಾಡುವ ಮನಸ್ಸು ಮಾಡ್ತಾರೆಂದುಕೊಂಡಿರಲಿಲ್ಲ. ಅವರು ನನ್ನ ಮಾವನಲ್ಲ. ದೇವರು ಎಂದಿದ್ದಾಳೆ ಬೆದಮಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...