alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ ವರ್ಷ ಬರಲಿದೆ ಕೀ ಇಲ್ಲದ ಕಾರ್

volvo0

ಕಾರ್ ಕೀ ಎಲ್ಲಿಟ್ಟೆ? ಕಾಣ್ತಾನೆ ಇಲ್ಲ ಅಂತಾ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಮುಂದಿವ ವರ್ಷ ಕೀ ಇಲ್ಲದ ಕಾರ್ ಬರ್ತಾ ಇದೆ. ಯಸ್ ಆ ಕಾರ್ ಗೆ ಕೀ ಬೇಕಾಗಿಲ್ಲ. ಡಿಜಿಟಲ್ ಕೀ ಪ್ರಮುಖ ಪಾತ್ರ ವಹಿಸಲಿದೆ. ಬಾರ್ಸಿಲೋನಾದಲ್ಲಿ ಫೆಬ್ರವರಿ 22 ರಿಂದ 25 ರವರೆಗೆ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಡೆಯಲಿದೆ. ಅದ್ರಲ್ಲಿ ವೋಲ್ವೋ ನವೀನ ತಂತ್ರಜ್ಞಾನದ ಕಾರನ್ನು ಮೊದಲ ಬಾರಿ ಪ್ರದರ್ಶಿಸಲಿದೆ.

ವೋಲ್ವೋ ಉತ್ಪಾದನಾ ಕಾರ್ಯತಂತ್ರ ಮತ್ತು ವಾಹನ ನಿರ್ವಹಣಾ ಇಲಾಖೆ ಉಪಾಧ್ಯಕ್ಷ ಹೆನ್ರಿಕ್ ಗ್ರೀನ್ ಈ ಕಾರಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಕಂಪನಿ ಕೇವಲ ಹೊಸ ತಂತ್ರಜ್ಞಾನವನ್ನು ಕಾರಿನಲ್ಲಿ ಅಳವಡಿಸಿಕೊಳ್ಳಲು ಮಾತ್ರ ಮಹತ್ವ ನೀಡುವುದಿಲ್ಲ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಅಭಿವೃದ್ಧಿ ಮಾಡುತ್ತದೆ. ಗ್ರಾಹಕರಿಗೆ ಸರಳ ಜೀವನ ನೀಡುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ ಹೆನ್ರಿಕ್.

ಡಿಜಿಟಲ್ ಕೀಗಾಗಿ ವೋಲ್ವೊ ಕಂಪನಿ ಗ್ರಾಹಕರಿಗೊಂದು ಮೊಬೈಲ್ ಅಪ್ಲಿಕೇಷನ್ ನೀಡಲಿದೆ. ಅದು ಬ್ಲೂಟೂತ್ ಜೊತೆ ಸಂಪರ್ಕ ಹೊಂದಿರುತ್ತದೆ. ಇದರ ಮೂಲಕ ಕಾರ್ ಕೀ ಯಿಂದಾಗುವ ಎಲ್ಲ ಕೆಲಸವನ್ನೂ ಅದು ಮಾಡುತ್ತದೆ. ಕಾರನ್ನು ಲಾಕ್-ಅನ್ ಲಾಕ್ ಮಾಡುವುದು, ಕಾರಿನ ಡಿಕ್ಕಿ ತೆರೆಯುವುದು ಹಾಗೂ ಕಾರನ್ನು ಸ್ಟಾರ್ಟ್ ಮಾಡುವ ಕೆಲಸವನ್ನು ಮಾಡುತ್ತದೆ. ಈ ಅಪ್ಲಿಕೇಷನನ್ನು ಮೊಬೈಲ್ ಒಂದೇ ಅಲ್ಲದೆ ಸ್ಮಾರ್ಟ್ ವಾಚ್ ಮೂಲಕವೂ ಬಳಸಬಹುದಾಗಿದೆ. ಒಬ್ಬ ವ್ಯಕ್ತಿಯ ಬಳಿ ಎರಡು ವೊಲ್ವೋ ಕಾರುಗಳಿದ್ದರೆ ಆ ವ್ಯಕ್ತಿ ಬೇರೆ ಬೇರೆ ಡಿಜಿಟಲ್ ಕೀ ಬಳಸಬಹುದು. ಒಂದನ್ನೇ ಎರಡಕ್ಕೂ ಬಳಸಬಹುದು. ಬೇರೆಯವರಿಗೆ ಕಾರ್ ನೀಡಬೇಕಾದಲ್ಲಿ ಮೊಬೈಲ್ ಮೂಲಕ ಅಪ್ಲಿಕೇಷನ್ ಶೇರ್ ಮಾಡಿಕೊಳ್ಳಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...