alex Certify
ಕನ್ನಡ ದುನಿಯಾ       Mobile App
       

Kannada Duniya

ಬರಿಗೈನಲ್ಲಿ 136 ತೆಂಗಿನ ಕಾಯಿ ಒಡೆದ ಭೂಪ..!

abeesh-p-dominicಕೇರಳದ ಕೊಟ್ಟಾಯಂ ಜಿಲ್ಲೆಯ ಅಬೀಶ್ ಪಿ ಡಾಮಿನಿಕ್ ಕೇವಲ 60 ಸೆಕೆಂಡ್ ಗಳಲ್ಲಿ 136 ತೆಂಗಿನ ಕಾಯಿಗಳನ್ನು ಬರಿಗೈನಲ್ಲಿ ಒಡೆಯುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿದ್ದಾರೆ.

ಕೇರಳ ರಸ್ತೆ ಸಾರಿಗೆ ನಿಗಮದ ಎರಟುಪೇಟ ವಿಭಾಗದಲ್ಲಿ ಗುತ್ತಿಗೆ ನೌಕರನಾಗಿ ಕಾರ್ಯ ನಿರ್ವಹಿಸುತ್ತಿರುವ ಅಬೀಶ್, ಮಂಗಳವಾರದಂದು ಆರೂರುನಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿ ಈ ಕೀರ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರ್ಪಡೆಗೊಳ್ಳಲು ಸಿದ್ದತೆ ನಡೆಸಿದ್ದಾರೆ.

ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವುದಕ್ಕೆ ಹೆಸರಾಗಿರುವ ಅಬೀಶ್, ಈ ಹಿಂದೆ ಹಲ್ಲಿನಿಂದ 10 ಟನ್ ತೂಕದ ಬಸ್ ಅನ್ನು 50 ಮೀಟರ್ ದೂರದವರೆಗೆ ಎಳೆದಿದ್ದರು. ಅಲ್ಲದೇ 2000 RPM ವೇಗದಲ್ಲಿ ತಿರುಗುತ್ತಿದ್ದ ಫ್ಯಾನನ್ನು ಬರಿಗೈನಿಂದ ತಡೆದು ನಿಲ್ಲಿಸಿ ತಮ್ಮ ಸಾಹಸ ಪ್ರದರ್ಶಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...