alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟಿಯಾಗಿ ಗ್ರಾಮಕ್ಕೊಂದು ರಸ್ತೆ ನಿರ್ಮಿಸಿದ ಸಾಹಸಿ

kerala-man-digs-road_650x400_61484113155

ಇವರು ಕೇರಳದ ಶಶಿ.ಜಿ , ಹೊಟ್ಟೆಪಾಡಿಗಾಗಿ ತೆಂಗಿನ ಕಾಯಿ ಕೀಳುವ ಕೆಲಸ ಮಾಡ್ತಾ ಇದ್ರು. 18 ವರ್ಷಗಳ ಹಿಂದೆ ತಿರುವನಂತಪುರಂನಲ್ಲಿ ತೆಂಗಿನ ಮರದ ಮೇಲಿಂದ ಬಿದ್ದು ಶಶಿ ತೀವ್ರ ಪೆಟ್ಟು ಮಾಡಿಕೊಂಡಿದ್ರು, ಆಗಿನಿಂದ ಅವರ ಬಲಗೈ ಮತ್ತು ಬಲಗಾಲು ಪಾರ್ಶ್ವವಾಯುವಿಗೆ ತುತ್ತಾಗಿದೆ. ನಿಧಾನವಾಗಿ ನಡೆದಾಡಲು ಮಾತ್ರ ಅವರಿಂದ ಸಾಧ್ಯವಾಗುತ್ತಿದೆ.

ಏನಾದ್ರೂ ಚಿಕ್ಕ ಬ್ಯುಸಿನೆಸ್ ಮಾಡೋಣ ಅಂದ್ರೆ ನಗರವನ್ನು ಸಂಪರ್ಕಿಸಲು ರಸ್ತೆಯೇ ಇರಲಿಲ್ಲ.  ರಸ್ತೆ ನಿರ್ಮಿಸಿ ಕೊಡುವಂತೆ ಗ್ರಾಮ ಪಂಚಾಯ್ತಿಗೆ ಮನವಿ ಕೊಟ್ಟು ಕೊಟ್ಟು ಶಶಿ ಸೋತು ಹೋಗಿದ್ರು. ಮೂರು ಚಕ್ರದ ವಾಹನವನ್ನಾದ್ರೂ ಕೊಡಿ ಅಂತಾ ಬೇಡಿಕೊಂಡ್ರೂ ಅಧಿಕಾರಿಗಳು ಕ್ಯಾರೇ ಅನ್ನಲಿಲ್ಲ. ರಸ್ತೆಯೇ ಇಲ್ಲ ವಾಹನ ಕೊಡೋಕೆ ಹೇಗೆ ಸಾಧ್ಯ ಅನ್ನೋದು ಅವರ ಪ್ರಶ್ನೆ.

ರಸ್ತೆ ನಿರ್ಮಿಸಿದ್ರೆ ಪಂಚಾಯ್ತಿಯಿಂದ ವಾಹನ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ಶಶಿ ಒಂಟಿಯಾಗಿಯೇ ರಸ್ತೆ ನಿರ್ಮಾಣಕ್ಕಾಗಿ ಅಗೆಯಲು ಶುರು ಮಾಡಿದ್ರು. ಪ್ರತಿದಿನ 6 ಗಂಟೆಗಳ ಕಾಲ ಅವರದ್ದು ಇದೇ ಕಾಯಕ. ಒಂದು ಕೈ ಮತ್ತು ಒಂದು ಕಾಲು ಹೆಚ್ಚು ಸಹಕರಿಸದೇ ಇದ್ರೂ ಕಷ್ಟಪಟ್ಟು ಶಶಿ 3 ವರ್ಷಗಳ ಬಳಿಕ 200 ಮೀಟರ್ ಉದ್ದದ ಕಚ್ಚಾ ರಸ್ತೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

ಪಂಚಾಯ್ತಿಯವರು ವಾಹನ ಕೊಡದೇ ಇದ್ರೂ ಪರವಾಗಿಲ್ಲ, ಭವಿಷ್ಯದಲ್ಲಿ ಗ್ರಾಮಸ್ಥರಿಗೊಂದು ರಸ್ತೆ ಮಾಡಿಕೊಟ್ಟಂತಾಗುತ್ತದೆ ಅನ್ನೋದು ಶಶಿ ಅವರ ಅಭಿಪ್ರಾಯ. ಒಬ್ಬಂಟಿಯಾಗಿಯೇ ಗ್ರಾಮಕ್ಕೊಂದು ರಸ್ತೆ ನಿರ್ಮಿಸಿಕೊಟ್ಟ ಶಶಿಗೆ ಸ್ಥಳೀಯರು ಕೂಡ ಧನ್ಯವಾದ ಅರ್ಪಿಸಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...