alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಾಶದಿಂದ ಬಿತ್ತು ಮಾಂಸದ ತುಂಡು

meat-rain_1473830539

ಆಕಾಶದಿಂದ ಏನು ಬೀಳುತ್ತೆ ಅಂತಾ ಕೇಳಿದ್ರೆ ಮಕ್ಕಳು ತಕ್ಷಣ ಮಳೆ ಎನ್ನುವ ಉತ್ತರ ಹೇಳ್ತಾರೆ. ಮಳೆ ಬೀಳೋದನ್ನು ಎಲ್ಲರೂ ನೋಡಿರ್ತಾರೆ ಬಿಡಿ. ಆದ್ರೆ ಮಾಂಸ ಬೀಳೋದನ್ನು ನೋಡಿದ್ದೀರಾ?

1876ರಲ್ಲಿ ಅಮೆರಿಕಾದ ಕೆಂಟುಕ್ಕಿಯಲ್ಲಿ ಅಚಾನಕ್ ಮಾಂಸದ ತುಣುಕುಗಳು ಆಕಾಶದಿಂದ ಉದುರಲು ಶುರುವಾಗಿದ್ದವು. ಇದನ್ನು ನೋಡಿದ ಜನರು ಆಶ್ಚರ್ಯಗೊಂಡಿದ್ದರು. ಕೆಲವರ ಭಯಕ್ಕೂ ಇದು ಕಾರಣವಾಗಿತ್ತು. ಆಗಿನ ಜನರ ಹೇಳಿಕೆಯಂತೆ ಸುಮಾರು 4-5 ನಿಮಿಷಗಳ ಕಾಲ ಆಕಾಶದಿಂದ ನಾಲ್ಕು ಇಂಚಿನ ಮಾಂಸ ಬೀಳ್ತಾ ಇತ್ತಂತೆ.

ಮಾಂಸದ ರುಚಿ ನೋಡಿದ ಸ್ಥಳೀಯರು ಇದು ಕರಡಿ ಮಾಂಸ ಎಂದುಕೊಂಡಿದ್ದರು. ನೆವಾರ್ಕ್ ಸೈನ್ಸ್ಯಿಸ್ಟ್  ಅಸೋಸಿಯೇಷನ್ ಇದು ಕುದುರೆ ಅಥವಾ ನವಜಾತ ಶಿಶುವಿನ ಮಾಂಸವಿರಬಹುದೆಂದು ಅಂದಾಜಿಸಿತ್ತು. ಆದ್ರೆ ಅಧ್ಯಯನದ ನಂತ್ರ ಆತಂಕಕಾರಿ ವಿಷಯ ಹೊರಬಿದ್ದಿತ್ತು.

ಇದೊಂದು ಬ್ಯಾಕ್ಟೀರಿಯಾ ಎಂಬುದು ಅಧ್ಯಯನದಿಂದ ತಿಳಿದುಬಂದಿತ್ತು. ಮೋಡಗಳಲ್ಲಿ ಸಂಗ್ರಹವಾಗಿದ್ದ ಅವು ಮಳೆಯ ಜೊತೆ ಕೆಳಗೆ ಬಿದ್ದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...