alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೂವರೆ ವರ್ಷದ ಮಗುವಿಗೆ ಕೋತಿಗಳೇ ಗುಡ್ ಫ್ರೆಂಡ್ಸ್

ಒಂದೂವರೆ ವರ್ಷದ ಪುಟ್ಟ ಬಾಲಕ ಹಾಗೂ ಮಂಗಗಳ ನಡುವಣ ಅನ್ಯೋನ್ಯತೆಯ ವಿಡಿಯೋ ಒಂದು ಜಾಲತಾಣಗಳಲ್ಲಿ ಹರಿದಾಡ್ತಿದೆ. ಹುಬ್ಬಳ್ಳಿಯ ಅಲ್ಲಾಪುರ ಗ್ರಾಮದಲ್ಲಿ ಈ ಪುಟಾಣಿ ನಿತ್ಯವೂ ಕೋತಿಗಳೊಂದಿಗೆ ಆಟವಾಡ್ತಾನೆ. ಅವುಗಳಿಗೆ ಆಹಾರವನ್ನು ಕೊಡ್ತಾನೆ.

ಕೋತಿಗಳು ಕೂಡ ಒಂದಾದ ಮೇಲೊಂದರಂತೆ ಬಂದು ಮಗುವಿನ ಕೈಯಲ್ಲಿರುವ ತಿಂಡಿಯನ್ನು ತೆಗೆದುಕೊಂಡು ಸ್ವಾಹಾ ಮಾಡುತ್ತವೆ. 6 ತಿಂಗಳ ಮಗುವಿದ್ದಾಗಿನಿಂದ್ಲೂ ಅವನಿಗೆ ಮಂಗಗಳಿಗೆ ಆಹಾರ ಹಾಕುವ ಅಭ್ಯಾಸವಿದೆಯಂತೆ. ಮಗುವಿಗೆ ಕೋತಿಗಳು ಯಾವುದೇ ರೀತಿ ತೊಂದರೆ ಕೊಟ್ಟಿಲ್ಲ.

ಪ್ರತಿದಿನ ಬೆಳಗ್ಗೆ ಬಂದು ಬಾಲಕನನ್ನು ನಿದ್ದೆಯಿಂದ ಎಬ್ಬಿಸುತ್ತವಂತೆ ಈ ಕೋತಿಗಳು. ಈ ವಿಡಿಯೋ ನೋಡಿದ ಕೆಲವರು ಮಗು ಮತ್ತು ಕೋತಿಗಳ ನಡುವಣ ಸ್ನೇಹವನ್ನು ಮೆಚ್ಚಿಕೊಂಡಿದ್ದಾರೆ. ಆದ್ರೆ ಇನ್ನು ಕೆಲವರು ಮಗುವಿನ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...